ಬೆಂಗಳೂರು : ಅನಾರೋಗ್ಯದಿಂದ ಬಳಲುತ್ತಿದ್ದ ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ, ನಿರ್ಮಾಪಕ, ನಟ ಎ.ಟಿ. ರಘು ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ರಘು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮಂಡ್ಯದ ಗಂಡು’ ಸೇರಿದಂತಹ 55 ಸಿನಿಮಾ ಗಳನ್ನು ನಿರ್ದೇಶನ ಮಾಡಿದ್ದಾರೆ. ಅಂಬರೀಶ್ ಅವರ ಅಭಿನಯದ 27 ಸಿನಿಮಾಗಳನ್ನು ಎ.ಟಿ. ರಘು ನಿರ್ದೇಶನ ಮಾಡಿದ್ದಾರೆ. ಅನೇಕ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ.
ಎ ಟಿ ರಘು ಕನ್ನಡ ಚಲನಚಿತ್ರ ನಿರ್ದೇಶಕರು. ಇವರು ನಿರ್ಮಾಪಕರೂ ನಟರೂ ಹೌದು. ೧೯೮೦ರಿಂದ ೧೯೯೮ರವರೆಗೆ ಸುಮಾರು ಇಪ್ಪತ್ತೈದಕ್ಕಿಂತಲೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರು ನಿರ್ದೇಶಿಸಿದ ಚಿತ್ರಗಳಲ್ಲಿ ಹೆಚ್ಚಿನವುಗಳ ನಾಯಕ ನಟ ಅಂಬರೀಷ್ ಆಗಿದ್ದಾರೆ. ಬಹುತೇಕ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಯಶಸ್ಸನ್ನು ಕಂಡಿವೆ. ಆ ದೃಷ್ಟಿಯಲ್ಲಿ ಇವರೊಬ್ಬ ಜನಪ್ರಿಯ ಹಾಗೂ ಜಯಶೀಲ ನಿರ್ದೇಶಕರು. ಇವರು ಕೊಡಗಿನಲ್ಲಿ ಜನಿಸಿದರು. ಇವರು ಕೊಡವ ಜನಾಂಗದವರಾಗಿದ್ದು, ಆಪಾಡಂಡ ಮನೆತನಕ್ಕೆ ಸೇರಿದವರು.
ನ್ಯಾಯ ನೀತಿ ಧರ್ಮ, ಅವಳ ನೆರಳು, ಅವಳ ನೆರಳು, ಅಂತಿಮ ತೀರ್ಪು, ಇನ್ಸ್ಪೆಕ್ಟರ್ ಕ್ರಾಂತಿಕುಮಾರ್, ಮಿಡಿದ ಹೃದಯಗಳು, ಮಂಡ್ಯದ ಗಂಡು, ಅಗ್ನಿಸಾಕ್ಷಿ ಸೇರಿದಂತೆ ಸುಮಾರು 55 ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ್ದರು.
ಎ.ಟಿ. ರಘು ನಿರ್ದೇಶಿಸಿದ ಚಲನಚಿತ್ರಗಳು
ನ್ಯಾಯ ನೀತಿ ಧರ್ಮ (1980)
ಶಂಕರ್-ಸುಂದರ್
ಆಶಾ (1983)
ಅವಳ ನೆರಳು (1983)
ಧರ್ಮಯುದ್ದ
ಮೇರಿ ಅದಾಲತ್ (1984) (ಹಿಂದಿ)
ಗೂಂಡಾಗುರು
ಗುರು ಜಗದ್ಗುರು
ಕಾಡಿನ ರಾಜ
ದೇವರ ಮನೆ
ಕಟ್ಟು ರಾಣಿ (ಮಲಯಾಳಂ)
ಪ್ರೀತಿ
ಅಂತಿಮ ತೀರ್ಪು
ಇನ್ಸ್ ಪೆಕ್ಟರ್ ಕ್ರಾಂತಿ ಕುಮಾರ್
ಆಪತ್ ಬಾಂಧವ
ಕೃಷ್ಣ ಮೆಚ್ಚಿದ ರಾಧೆ
ಪದ್ಮ ವ್ಯೂಹ
ನ್ಯಾಯಕ್ಕಗಿ ನಾನು
ಅಜಯ್ ವಿಜಯ್
ಕೆಂಪು ಸೂರ್ಯ
ಪುಟ್ಟ ಹೆಂಡ್ತಿ
ಮೈಸೂರು ಜಾಣ
ಸೂರ್ಯೋದಯ
ಮಿಡಿದ ಹೃದಯಗಳು
ಜೈಲರ್ ಜಗನ್ನಾಥ್
ಮಂಡ್ಯದ ಗಂಡು
ಶ್ರ್ರಾವಣ ಸಂಜೆ
ಬೇಟೆಗಾರ