ನವದೆಹಲಿ: ಪೇಟಿಎಂ ಅಪ್ಲಿಕೇಶನ್ ಕಾರ್ಯಾಚರಣೆಯನ್ನ ಮುಂದುವರಿಸಲು ಮತ್ತು @paytm ಹ್ಯಾಂಡಲ್ಗಳನ್ನು 4-5 ಬ್ಯಾಂಕುಗಳಿಗೆ ಸ್ಥಳಾಂತರಿಸಲು ಅನುಕೂಲವಾಗುವಂತೆ ಯುಪಿಐ ಚಾನೆಲ್ ಬಳಕೆಯನ್ನ ಪರಿಶೀಲಿಸುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಶುಕ್ರವಾರ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI)ಗೆ ಸೂಚಿಸಿದೆ.
ಪೇಟಿಎಂ ಅಪ್ಲಿಕೇಶನ್ನ ಯುಪಿಐ ಕಾರ್ಯಾಚರಣೆಗಳನ್ನ ಮುಂದುವರಿಸಲು ಥರ್ಡ್ ಪಾರ್ಟಿ ಅಪ್ಲಿಕೇಶನ್ ಪ್ರೊವೈಡರ್ ಆಗುವ ಸಾಧ್ಯತೆಯನ್ನ ಪರಿಶೀಲಿಸುವಂತೆ ಆರ್ಬಿಐ ಎನ್ಪಿಸಿಐಗೆ ಕೇಳಿದೆ.
ಮಾರ್ಚ್ 15, 2024 ರ ನಂತರ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ತನ್ನ ಗ್ರಾಹಕರ ಖಾತೆಗಳು ಮತ್ತು ವ್ಯಾಲೆಟ್ಗಳಿಗೆ ಹೆಚ್ಚಿನ ಕ್ರೆಡಿಟ್ಗಳನ್ನ ಸ್ವೀಕರಿಸುವುದನ್ನ ಕೇಂದ್ರ ಬ್ಯಾಂಕ್ ನಿಷೇಧಿಸಿದೆ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನಿರ್ವಹಿಸುವ ‘@paytm’ ಹ್ಯಾಂಡಲ್ ಬಳಸಿ ಯುಪಿಐ ಗ್ರಾಹಕರು ತಡೆರಹಿತ ಡಿಜಿಟಲ್ ಪಾವತಿಗಳನ್ನ ಖಚಿತಪಡಿಸಿಕೊಳ್ಳುವ ಉದ್ದೇಶದಿಂದ, ಪೇಟಿಎಂ ಅಪ್ಲಿಕೇಶನ್ನ ಯುಪಿಐ ಕಾರ್ಯಾಚರಣೆಯನ್ನ ಮುಂದುವರಿಸಲು ಯುಪಿಐ ಚಾನೆಲ್ಗೆ ಥರ್ಡ್-ಪಾರ್ಟಿ ಅಪ್ಲಿಕೇಶನ್ ಪ್ರೊವೈಡರ್ (TPAP) ಆಗಬೇಕೆಂಬ ವಿನಂತಿಯನ್ನ ಪರಿಶೀಲಿಸುವಂತೆ ಆರ್ಬಿಐ ರಾಷ್ಟ್ರೀಯ ಪಾವತಿ ನಿಗಮವನ್ನ (NPCI) ಕೇಳಿದೆ.
RBI on Paytm Payments Bank – 'Additional steps' and advice to National Payments Corporation of India (NPCI) pic.twitter.com/3OKweTZrb4
— ANI (@ANI) February 23, 2024
ಪೇಟಿಎಂ ಬ್ರಾಂಡ್ ಮಾಲೀಕತ್ವದ ಒನ್ 97 ಕಮ್ಯುನಿಕೇಷನ್ ಲಿಮಿಟೆಡ್ (OCL) ಈ ಮನವಿ ಮಾಡಿದೆ ಎಂದು ಆರ್ಬಿಐ ಹೇಳಿಕೆಯಲ್ಲಿ ತಿಳಿಸಿದೆ.
ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ಮಾರ್ಚ್’ನಲ್ಲಿ ಶೇ.4ರಷ್ಟು ‘ತುಟ್ಟಿಭತ್ಯೆ’ ಹೆಚ್ಚಳ ಸಾಧ್ಯತೆ
ಕಾಂಗ್ರೆಸ್ ಸಂಸದ ‘ಡಿ.ಕೆ.ಸುರೇಶ್’ ವಿರುದ್ಧ ‘ಡಾ.ಮಂಜುನಾಥ್’ ಕಣಕ್ಕಿಳಿಯಲು ‘NDA’ ಚಿಂತನೆ
BREAKING: ಖುದ್ದು ವಿಚಾರಣೆಗೆ ಹಾಜರಾಗುವಂತೆ ರಾಹುಲ್ ಗಾಂಧಿ, ಸಿದ್ಧರಾಮಯ್ಯ, ಡಿಕೆಶಿಗೆ ಕೋರ್ಟ್ ಸಮನ್ಸ್ ಜಾರಿ