ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಸ್ಪೋಟಕ ಮಾಹಿತಿ ಬಹಿರಂಗವಾಗಿದ್ದು, ಶಂಕಿತ ಬಾಂಬರ್ ಗಳು ಬೆಂಗಳೂರಿನ ಹೊರ ವಲಯದಲ್ಲೇ ಬಾಂಬ್ ತಯಾರಿಸುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣದ ಸಂಬಂಧ ತನಿಕೆ ನಡೆಸುತ್ತಿರುವ ಎನ್ ಐಎ ಅಧಿಕಾರಿಗಳಿಗೆ ಇದೀಗ ಸ್ಪೋಟಕ ಮಾಹಿತಿ ಲಭ್ಯವಾಗಿದ್ದು, ಶಂಕಿತ ಉಗ್ರರು ಬೆಂಗಳೂರಿನ ಹೊರ ವಲಯದಲ್ಲೇ ಬಾಂಬ್ ತಯಾರಿಸುತ್ತಿದ್ದರು ಎಂದು ತಿಳಿದುಬಂದಿದೆ.
ಶಂಕಿತ ಉಗ್ರರಾದ ಅಬ್ದುಲ್ ಮತ್ತು ಮುಸಾವೀರ್ ಆನ್ ಲೈನ್ ನಲ್ಲೇ ಡಿಟೋನೇಟರ್, ಟೈಮರ್ ಗಳನ್ನು ಬುಕ್ ಮಾಡುತ್ತಿದ್ದರು. ಅಂಗಡಿಗಳಲ್ಲಿ ನಟ್, ಬೋಲ್ಟ್ , ವೈರ್ ಗಳನ್ನು ಖರೀದಿ ಮಾಡುತ್ತಿದ್ದರು. ಬಳಿಕ ಎರಡು ತಿಂಗಳಿಗೆ ಒಂದರಂತೆ ಬಾಂಬ್ ತಯಾರಿಸುತ್ತಿದ್ದರು.
ಬೆಂಗಳೂರಿನ ಹೊರ ವಲಯದಲ್ಲಿ ಬಾಂಬ್ ತಯಾರಿಕೆಗೆ ಆರು ತಿಂಗಳಿನಿಂದಲೇ ಪ್ಲ್ಯಾನ್ ಮಾಡಲಾಗಿತ್ತು. ಉಗ್ರರು 4,500 ರೂ. ನಿಂದ 5,000 ರೂ. ಖರ್ಚು ಮಾಡಿ ಬಾಂಬ್ ತಯಾರಿಸುತ್ತಿದ್ದರು ಎನ್ನುವ ಸ್ಪೋಟಕ ಮಾಹಿತಿ ಲಭ್ಯವಾಗಿದೆ.