ನವದೆಹಲಿ: ಅಸ್ಸಾಂ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷದ ಆರೋಪಗಳ ಮಧ್ಯೆ, ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಮುಂದುವರಿಸಲು ಗುವಾಹಟಿಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಸುಮಾರು 5,000 ಕಾಂಗ್ರೆಸ್ ಕಾರ್ಯಕರ್ತರನ್ನು ರಾಜ್ಯ ಪೊಲೀಸರು ಮಂಗಳವಾರ ತಡೆದಿದ್ದಾರೆ ಅಂತ ತಿಳಿದು ಬಂದಿದೆ.
ಇದೇ ವೇಳೆ ಅಸ್ಸಾಂನ ಗುವಾಹಟಿಯಲ್ಲಿ ಕಾಂಗ್ರೆಸ್ನ ಭಾ ರತ್ ಜೋಡೋ ನ್ಯಾಯ್ ಯಾತ್ರೆ ವೇಳೆ ಪೊಲೀಸರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಮುಖ್ಯ ಮಾರ್ಗಗಳ ಮೂಲಕ ನಗರವನ್ನು ಪ್ರವೇಶಿಸಲು ಅನುಮತಿ ನಿರಾಕರಿಸಿದ ನಂತರ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದರಿಂದ ಉದ್ವಿಗ್ನತೆ ಭುಗಿಲೆದ್ದಿದೆ.
ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಅಸ್ಸಾಂ ಸರ್ಕಾರವು ಯಾತ್ರೆಯನ್ನು ನಗರದಿಂದ ದೂರವಿರಲು ಮತ್ತು ಬದಲಿಗೆ ಗುವಾಹಟಿ ಬೈಪಾಸ್ ಅನ್ನು ಬಳಸಲು ನಿರ್ದೇಶಿಸಿದ ನಂತರ ಘರ್ಷಣೆ ಸಂಭವಿಸಿದೆ. ಘಟನಾ ಸ್ಥಳದ ದೃಶ್ಯಗಳಲ್ಲಿ ಹಲವಾರು ಕಾಂಗ್ರೆಸ್ ಬೆಂಬಲಿಗರು, ಅವರಲ್ಲಿ ಹಲವರು ಪಕ್ಷದ ಧ್ವಜಗಳನ್ನು ಹಿಡಿದು, ಪೊಲೀಸ್ ಸಿಬ್ಬಂದಿಯೊಂದಿಗೆ ಜಗಳವಾಡುವುದು ಮತ್ತು ಬ್ಯಾರಿಕೇಡ್ಗಳನ್ನು ಮುರಿಯಲು ಪ್ರಯತ್ನಿಸುತ್ತಿರುವುದನ್ನು ತೋರಿಸಿದೆ.
#WATCH | A clash broke out between Police and Congress workers in Assam's Guwahati, during Congress' Bharat Jodo Nyay Yatra.
More details awaited. pic.twitter.com/WxitGxup3m
— ANI (@ANI) January 23, 2024