ನವದೆಹಲಿ: ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಇಬ್ಬರೂ ಲೋಕಸಭಾ ಚುನಾವಣೆಯಲ್ಲಿ ಅಮೇಥಿ ಮತ್ತು ರಾಯ್ ಬರೇಲಿ ಕ್ಷೇತ್ರಗಳಿಂದ ಸ್ಪರ್ಧಿಸುವ ಸಾಧ್ಯತೆಯಿಲ್ಲ ಎಂದು ಮೂಲಗಳು ಗುರುವಾರ ತಿಳಿಸಿವೆ.
ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ದೆಹಲಿಯಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ನಂತರ ಎರಡು ನಿರ್ಣಾಯಕ ಸ್ಥಾನಗಳಿಗೆ ಅಭ್ಯರ್ಥಿಗಳನ್ನ ಆಯ್ಕೆ ಮಾಡುವ ಬಗ್ಗೆ ಕಾಂಗ್ರೆಸ್ ಚಿಂತನ ಮಂಥನ ನಡೆಸುತ್ತಿದೆ. ಅಮೇಥಿ ಮತ್ತು ರಾಯ್ ಬರೇಲಿಗೆ ಗ್ರ್ಯಾಂಡ್ ಓಲ್ಡ್ ಪಕ್ಷದ ಅಭ್ಯರ್ಥಿಗಳ ಘೋಷಣೆ ಇಂದು ನಿರೀಕ್ಷಿಸಲಾಗಿದೆ.
ಈ ಹಿಂದೆ, ಕಾಂಗ್ರೆಸ್ ಸಸ್ಪೆನ್ಸ್ ಕೊನೆಗೊಳಿಸಬಹುದು ಮತ್ತು ಸ್ಮೃತಿ ಇರಾನಿ ವಿರುದ್ಧ ರಾಹುಲ್ ಗಾಂಧಿಯನ್ನ ಅಮೇಥಿಯಿಂದ ಕಣಕ್ಕಿಳಿಸಬಹುದು ಎಂಬ ಊಹಾಪೋಹಗಳು ಹರಡಿದ್ದವು, ಆದರೆ ಅವರನ್ನ ಕಣಕ್ಕಿಳಿಸುವ ಸಾಧ್ಯತೆಗಳು ಈಗ ತುಂಬಾ ಕಡಿಮೆ.
ವಿಶ್ವಸಂಸ್ಥೆಯಲ್ಲಿ ‘ಅಮೆರಿಕ, ಇಸ್ರೇಲ್’ಗೆ ಶಾಕ್ ಕೊಟ್ಟ ಭಾರತ ; ‘ಸ್ವತಂತ್ರ ಪ್ಯಾಲೆಸ್ಟೈನ್’ ಬೇಡಿಕೆಗೆ ಬೆಂಬಲ
ಯಾದಗಿರಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ನಾಲ್ಕು ಗುಡಿಸಲು ಸುಟ್ಟು ಭಸ್ಮ