ಲುಧಿಯಾನ : ಪಂಜಾಬ್ ರಾಜ್ಯದ ಲುಧಿಯಾನ ಪಶ್ಚಿಮ ಶಾಸಕ ಗುರುಪ್ರೀತ್ ಬಸ್ಸಿ ಗೋಗಿ ಶುಕ್ರವಾರ ರಾತ್ರಿ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಗುರುಪ್ರೀತ್ ಬಸ್ಸಿ ಗೋಗಿ ಸಾವನ್ನು ದೃಢಪಡಿಸಿದ ಜಂಟಿ ಪೊಲೀಸ್ ಆಯುಕ್ತ ಜಸ್ಕರನ್ ಸಿಂಗ್ ತೇಜ, ಅವರನ್ನು ಡಿಎಂಸಿ ಆಸ್ಪತ್ರೆಗೆ ತರಲಾಗಿದ್ದ. ಅವರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರದಲ್ಲಿ ಇರಿಸಲಾಗಿದೆ ಎಂದು ತೇಜ ಹೇಳಿದರು.
ಶಾಸಕರು ಹಗಲಿನ ನಿಯಮಿತ ಕಾರ್ಯಕ್ರಮಗಳ ನಂತರ ಘುಮರ್ ಮಂಡಿಯಲ್ಲಿರುವ ತಮ್ಮ ಮನೆಗೆ ಮರಳಿದ್ದರು. ಅವರು ತಮ್ಮ ಕೊನೆಯ ಕ್ಷಣಗಳಲ್ಲಿ ಕುಟುಂಬದೊಂದಿಗೆ ಇದ್ದರು. ಆದರೆ ನಿಗೂಢವಾಗಿ ಸಾವನ್ನಪ್ಪಿದ್ದು, ಅವರ ದೇಹದಲ್ಲಿ ಗುಂಡು ಇರುವುದು ಪತ್ತೆಯಾಗಿದೆ ಎಂದು ಎಂದು ಎಎಪಿ ಜಿಲ್ಲಾ ಕಾರ್ಯದರ್ಶಿ ಪರಮವೀರ್ ಸಿಂಗ್ ಹೇಳಿದ್ದಾರೆ.
ಮೃತರ ಪತ್ನಿ ಡಾ. ಸುಖಚೈನ್ ಕೌರ್ ಗೋಗಿ ಗುಂಡೇಟಿನ ಶಬ್ದವನ್ನು ಕೇಳಿ ಸ್ಥಳಕ್ಕೆ ಧಾವಿಸಿ ತಮ್ಮ ಪತಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡುಕೊಂಡರು ಎಂದು ಮೂಲಗಳು ತಿಳಿಸಿವೆ. ಭದ್ರತಾ ಸಿಬ್ಬಂದಿಯ ಸಹಾಯದಿಂದ ಕುಟುಂಬವು ಅವರನ್ನು ಡಿಎಂಸಿಎಚ್‌ಗೆ ಕರೆದೊಯ್ದರು ಎಂದು ಅವರು ಹೇಳಿದರು. ಅವರನ್ನು ಡಿಎಂಸಿಎಚ್‌ನಲ್ಲಿ ಮೃತಪಟ್ಟಿರುವುದಾಗಿ ಘೋಷಿಸಲಾಯಿತು.