ಕಲಬುರಗಿ : ಢಕಾಯಿತ ಪ್ರಕರಣದಲ್ಲಿ ಜೈಲು ಸೇರಿದ್ದ ವಿಚಾರಣಾಧೀನ ಕೈದಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದ ಜೈಲಿನಲ್ಲಿ ನಡೆದಿದೆ. ಹೃದಯಾಘಾತದಿಂದ ವಿಚಾರಣಾಧೀನ ಕೈದಿ ರಿಯಾಜ್ ಅಹಮದ್(27) ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಡಕಾಯಿತಿ ಪ್ರಕರಣದಲ್ಲಿ ರಿಯಾಜ್ ಅಹಮದ್ ನನ್ನು ಮಿರಿಯಾಣ ಠಾಣೆ ಪೊಲೀಸರು ಬಂಧಿಸಿದ್ದರು. 2022ರ ಆಗಸ್ಟ್ ನಿಂದಲೂ ಜೈಲಿನಲ್ಲಿದ್ದ ರಿಯಾಜ್ ಅಹಮದ್ ಹಠಾತ್ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಸೇಡಂ ಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.