ಉಡುಪಿ : ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಆಯೋಜಿಸಲಾದ ‘ಲಕ್ಷ ಕಂಠ ಗೀತಾ ಪಾರಾಯಣ’ದಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಅವರು ಇಂದು ಉಡುಪಿಗೆ ಆಗಮಿಸಿದ್ದಾರೆ.
ಉಡುಪಿಯ ಕೃಷ್ಣ ಮಠಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅಷ್ಟಮಠದ ಪ್ರಮುಖರು ಸ್ವಾಗತಿಸಿದ್ದು, ಬಳಿಕ ಸ್ವರ್ಣಲೇಪಿತ ಕನಕನ ಕಿಂಡಿ ಉದ್ಘಾಟಿಸಿದ್ದಾರೆ. ಬಳಿಕ ನವಗ್ರಹ ಕಿಂಡಿ ಮೂಲಕ ಶ್ರೀಕೃಷ್ಣನ ದರ್ಶನ ಪಡೆದಿದ್ದಾರೆ.
ಜಗದ್ಗುರು ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ವಿಶ್ವ ಗೀತಾ ಪರ್ಯಾಯ – ಲಕ್ಷಕಾಂತ ಗೀತಾ ಪಾರಾಯಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸನ್ಮಾನಿಸಿದರು.
ಇದೀಗ ಪ್ರಧಾನಿ ಮೋದಿ ಅವರು ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗಿಯಾಗಿದ್ದಾರೆ. ಉಡುಪಿ ಕೃಷ್ಣಮಠದಲ್ಲಿ 1 ತಿಂಗಳ ಕಾಲ ಬೃಹತ್ ಗೀತೋತ್ಸವ ನಡೆಯಲಿದ್ದು, ಇಂದಿನಿಂದ ಬರೋಬ್ಬರಿ 1 ಲಕ್ಷ ಭಕ್ತರಿಂದ ಲಕ್ಷ ಕಂಠ ಗೀತಾ ಉತ್ಸವ ಆಯೋಜನೆ ಮಾಡಲಾಗಿದೆ. 1 ಲಕ್ಷ ಭಕ್ತರ ಜೊತೆ ಶ್ಲೋಕ ಪಠಣ ಮಾಡಲಿದ್ದಾರೆ.ಈ ಕಾರ್ಯಕ್ರಮದಲ್ಲಿ ಮೋದಿ ಭಾಗಿಯಾಗಲಿದ್ದು, ಮೋದಿ ಕೊನೆಯ 10 ಶ್ಲೋಕ ಪಠಿಸಲಿದ್ದಾರೆ.
ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದ ನಂತರ ಪ್ರಧಾನಿ ಮೋದಿಯವರು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಜೊತೆಗೆ ಮಾತುಕತೆ ನಡೆಸಲಿದ್ದಾರೆ.
#WATCH | Udupi, Karnataka | Jagadguru Sri Sri Sugunendra Theertha Swamiji felicitates PM Narendra Modi at the Vishwa Gita Paryaay- Laksha Kantha Gita Parayana.
Source: DD pic.twitter.com/L2esWvStXh
— ANI (@ANI) November 28, 2025








