ಬೆಂಗಳೂರು : ಪ್ರಧಾನಿ ಮೋದಿ ಅವರು ರಸ್ತೆಯ ಮೂಲಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಹೊರಟಿದ್ದು, ಈ ವಳೆ ರಸ್ತೆಯಲ್ಲಿ ಇಕ್ಕೆಲಗಳಲ್ಲಿ ಜನರು ಮೋದಿ ಮೋದಿ ಘೋಷಣೆ ಕೂಗುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಹೆಚ್ ಎಎಲ್ ಗೆ ಬಂದಿಳಿದಿದ್ದು, ಭರ್ಜರಿ ಸ್ವಾಗತ ಕೋರಲಾಗಿದೆ. ಬೆಂಗಳೂರಿನ ನಮ್ಮ ಮೆಟ್ರೋ `ಹಳದಿ ಮೆಟ್ರೋ’ ಮಾರ್ಗ ಉದ್ಘಾಟನೆ ಹಾಗೂ 3 ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಇಂದು ಬೆಳಿಗ್ಗೆ 10:55 ಕ್ಕೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ್ದಾರೆ.
ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ಮೋದಿ ಹೆಲಿಕಾಪ್ಟರ್ ಮೂಲಕ ಮೇಖ್ರಿ ಸರ್ಕಲ್ ಬಳಿ ಇರುವ ಹೆಚ್.ಕ್ಯು.ಟಿ.ಸಿ. ಕೇಂದ್ರಕ್ಕೆ ಆಗಮಿಸಲಿದ್ದಾರೆ. ನಂತರ ರಸ್ತೆ ಮಾರ್ಗವಾಗಿ 11 15ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಬೆಂಗಳೂರು -ಬೆಳಗಾವಿ ವಂದೇ ಭಾರತ್ ಸೇರಿದಂತೆ ದೇಶದಲ್ಲಿ ಒಟ್ಟು ಮೂರು ಹೊಸ ವಂದೇ ಭಾರತ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ.
VIDEO | During his visit to Karnataka today, PM Narendra Modi (@narendramodi) will flag off three Vande Bharat Express trains from Bengaluru. Visuals of Vande Bharat Express trains from Bengaluru railway station.#VandeBharatExpress pic.twitter.com/Sw5wo9jkGJ
— Press Trust of India (@PTI_News) August 10, 2025
VIDEO | Bengaluru is getting decked up for PM Narendra Modi's (@narendramodi) visit in the city for inauguration of a new metro line, it is expected to greatly benefit the people of Bengaluru in terms of traffic congestion.
Almost 5,000 BJP workers and civilians have gathered… pic.twitter.com/eu2vFAIu8i
— Press Trust of India (@PTI_News) August 10, 2025