ಪ್ರಯಾಗ್ ರಾಜ್ ; ಬುಧವಾರ ಮುಂಜಾನೆ ಮಹಾಕುಂಭದಲ್ಲಿ ಸಂಭವಿಸಿದ ದುರಂತ ಕಾಲ್ತುಳಿತದಲ್ಲಿ ಮೂವತ್ತು ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ. 25 ಸಂತ್ರಸ್ತರನ್ನ ಗುರುತಿಸಲಾಗಿದ್ದು, ಉಳಿದ ಐವರನ್ನು ಇನ್ನೂ ಗುರುತಿಸಲಾಗುತ್ತಿದೆ ಎಂದು ಮಹಾಕುಂಭದ ಡಿಐಜಿ ವೈಭವ್ ಕೃಷ್ಣ ದೃಢಪಡಿಸಿದ್ದಾರೆ.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಉತ್ತರ ಪ್ರದೇಶ ಡಿಐಜಿ ವೈಭವ್ ಕೃಷ್ಣ, ಕಾಲ್ತುಳಿತದಲ್ಲಿ 30 ಭಕ್ತರು ಗಾಯಗೊಂಡಿದ್ದು, ಇದುವರೆಗೆ 25 ಮೃತದೇಹಗಳ ಗುರುತು ಪತ್ತೆ ಹಚ್ಚಿದ್ದೇವೆ. ಇನ್ನು 90 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು. ಇನ್ನು ಇಂದು ಯಾರಿಗೂ ವಿಐಪಿ,ವಿವಿಐಪಿ ವ್ಯವಸ್ಥೆ ಮಾಡಿರಲಿಲ್ಲ ಎಂದು ತಿಳಿಸಿದರು.
Prayagraj, UP: 30 people have lost their lives in the Maha Kumbh stampede that took place between 1-2 AM. 25 people have been identified and the identification of the remaining 5 is being done: DIG Mahakumbh, Vaibhav Krishna pic.twitter.com/9CqHORT0wt
— ANI (@ANI) January 29, 2025
ಫೆ.1ರಿಂದ ‘CBSE 10, 12ನೇ ತರಗತಿ ವಿದ್ಯಾರ್ಥಿ’ಗಳಿಗೆ ಉಚಿತ ‘ಕೌನ್ಸೆಲಿಂಗ್’ ಆರಂಭ