ಚೆನ್ನೈ : ಜನಪ್ರಿಯ ನಟಿ, ನಿರ್ಮಾಪಕಿ ಮತ್ತು ರಾಜಕಾರಣಿ ರಾಧಿಕಾ ಶರತ್ ಕುಮಾರ್ ಅವರು ಇದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದಾರೆ. ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಅವರನ್ನ ಜುಲೈ 28 ರಂದು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವರದಿಯಾಗಿದೆ. ಆರಂಭದಲ್ಲಿ, ಇದು ಸಾಮಾನ್ಯ ಜ್ವರ ಎಂದು ಭಾವಿಸಲಾಗಿತ್ತು, ಆದರೆ ವೈದ್ಯಕೀಯ ಪರೀಕ್ಷೆಗಳ ನಂತರ, ಅವರಿಗೆ ಡೆಂಗ್ಯೂ ಸೋಂಕು ತಗುಲಿರುವುದು ಗೊತ್ತಾಗಿದೆ.
ತಮಿಳು ಮಾಧ್ಯಮ ದಿನಮಲರ್’ನಲ್ಲಿ ಬಂದ ವರದಿಯ ಪ್ರಕಾರ, ರಾಧಿಕಾ ಅವರ ಆರೋಗ್ಯ ಸ್ಥಿತಿಯನ್ನ ವೈದ್ಯರು ಗಂಭೀರವಾಗಿ ಪರಿಗಣಿಸಿದ್ದಾರೆ. ಅವರಿಗೆ ವಿಶೇಷ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರ ಸಲಹೆಯಂತೆ, ಆಗಸ್ಟ್ 5ರವರೆಗೆ ಆಸ್ಪತ್ರೆಯಲ್ಲಿಯೇ ಇರಲು ಸೂಚಿಸಲಾಗಿದೆ. ನಂತರ ಅವರನ್ನು ಡಿಸ್ಚಾರ್ಜ್ ಮಾಡುವ ಸಾಧ್ಯತೆಯಿದೆ.
ಅಭಿಮಾನಿಗಳಲ್ಲಿ ಆತಂಕ.!
ರಾಧಿಕಾ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ವೈರಲ್ ಆಗಿದ್ದು, ಕಾಲಿವುಡ್ ಉದ್ಯಮ ಹಾಗೂ ಅವರ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ. #GetWellSoonRaadhika ಎಂಬ ಹ್ಯಾಶ್‌ಟ್ಯಾಗ್ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗುತ್ತಿದೆ. ಅನೇಕ ಚಲನಚಿತ್ರ ತಾರೆಯರು ಮತ್ತು ಸಹನಟರು ಅವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸುತ್ತಿದ್ದಾರೆ.
ರೈತರು ಸೇರಿ ಎಲ್ಲರೂ… ಅಮೆರಿಕದ ಸುಂಕದ ಕುರಿತು ಲೋಕಸಭೆಯಲ್ಲಿ ‘ಪಿಯೂಷ್ ಗೋಯಲ್’ ಉತ್ತರ