ಮಂಡ್ಯ : ಮಂಡ್ಯದಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮೂವರು ಗಾಂಜಾ ಫೆಡ್ಲರ್ಸ್ ಗಳನ್ನು ಬಂಧಿಸಲಾಗಿದ್ದು, 10 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ನುಗ್ಗಹಳ್ಳಿ ಬಳಿ ಪಾಂಡವಪುರ ತಹಶೀಲ್ದಾರ್ ಬಸಪ್ಪರೆಡ್ಡಿ ರೋಣದ ನೇತೃತ್ವದಲ್ಲಿ ಪೊಲೀಸರ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಗಾಂಜಾ ತುಂಬಿಕೊಂಡು ಡೀಲ್ ಕುದಿರಿಸಲು ಬಂದಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ರಕ್ಷಿತ್, ಗೌತಮ್,ಮನೋಜ್ ಬಂಧಿತ ಗಾಂಜಾ ಫೆಡ್ಲರ್ಸ್ ಗಳು. ಒರಿಸ್ಸಾದಿಂದ ಗಾಂಜಾ ಖರೀದಿಸಿ ಸ್ಥಳೀಯರಿಗೆ ಮಾರಲು ತಂದಿದ್ದ ಆರೋಪಿಗಳು. ಖಚಿತ ಮಾಹಿತಿ ಆಧರಿಸಿ ಪೊಲೀಸರಿಂದಿಗೆ ತಹಶೀಲ್ದಾರ್ ದಾಳಿ ನಡೆಸಿದ್ದಾರೆ. ಆರೋಪಿಗಳ ವಿರುದ್ದ NDPS ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನದ ವಶಕ್ಕೆ ಪಡೆಯಲಾಗಿದೆ.








