ಬೆಂಗಳೂರು : ಭಾರತೀಯ ಹಾಕಿ ಆಟಗಾರ ವರುಣ್ ಕುಮಾರ್ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಪ್ರಕರಣ ದಾಖಲಿಸಲಾಗಿದೆ. ವರುಣ್ ಕುಮಾರ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ
“ತಾನು 17 ವರ್ಷದವಳಿದ್ದಾಗ ವರುಣ್ ಕುಮಾರ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ವರುಣ್ ತಾನು ಮದುವೆಯಾಗುವುದಾಗಿ ಭರವಸೆ ನೀಡಿದ್ದನು ಮತ್ತು ಕಳೆದ ಐದು ವರ್ಷಗಳಲ್ಲಿ ಅವಳನ್ನು ಅನೇಕ ಬಾರಿ ನನ್ನ ಜೊತೆಗೆ ದೈಹಿಕ ಸಸಂಪರ್ಕ ಇಟ್ಟುಕೊಂಡಿದ್ದ ಎನ್ನಲಾಗಿದೆ.
ವರುಣ್ ಕುಮಾರ್ ಇನ್ಸ್ಟಾಗ್ರಾಮ್ ಮೂಲಕ ಮಹಿಳೆಯನ್ನು ಭೇಟಿಯಾದರು ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಈ ಘಟನೆ 2019 ರಲ್ಲಿ ಸಂಭವಿಸಿದೆ ಎನ್ನಲಾಗಿದೆ. ಜಲಂಧರ್ ಮೂಲದ ವರುಣ್ ಕುಮಾರ್ ಒಬ್ಬ ಭಾರತೀಯ ಫೀಲ್ಡ್ ಹಾಕಿ ಆಟಗಾರ ಆಗಿದ್ದಾರೆ, ಅವರು ಹಾಕಿ ಇಂಡಿಯಾ ಲೀಗ್ ಮತ್ತು ಭಾರತೀಯ ರಾಷ್ಟ್ರೀಯ ತಂಡದಲ್ಲಿ ಪಂಜಾಬ್ ವಾರಿಯರ್ಸ್ ಪರ ಡಿಫೆಂಡರ್ ಆಗಿ ಅಟವಾಡುತ್ತಾರೆ. ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಮೂಲಗಳ ಪ್ರಕಾರ, ಕರ್ನಾಟಕ ಪೊಲೀಸ್ ಅಧಿಕಾರಿಗಳ ತಂಡವು ಜಲಂಧರ್ ಗೆ ತೆರಳಿ ಭಾರತೀಯ ಹಾಕಿ ಆಟಗಾರನನ್ನು ವಿಚಾರಣೆ ನಡೆಸಲಿದೆ ಎನ್ನಲಾಗಿದೆ.