ಮಾಸ್ಕೋ : ಎರಡು ದಿನಗಳ ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಟ್ರಿಯಾಕ್ಕೆ ತೆರಳಿದ್ದಾರೆ. ರಾಜಧಾನಿ ವಿಯೆನ್ನಾ ತಲುಪಿದ ನಂತರ ಅವರು ಆಸ್ಟ್ರಿಯಾದ ಚಾನ್ಸಲರ್ ಕಾರ್ಲ್ ನೆಹಮ್ಮರ್ ಅವರನ್ನ ಭೇಟಿ ಮಾಡಲಿದ್ದಾರೆ. ಕಳೆದ 40 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಆಸ್ಟ್ರಿಯಾಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. 1983ರಲ್ಲಿ, ಇಂದಿರಾ ಗಾಂಧಿ ಮಧ್ಯ ಯುರೋಪಿಯನ್ ರಾಷ್ಟ್ರಕ್ಕೆ ಭೇಟಿ ನೀಡಿದರು. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನ ಹೆಚ್ಚಿಸಲು ಒತ್ತು ನೀಡುವಾಗ, ಪಿಎಂ ಮೋದಿ ಮತ್ತು ಚಾನ್ಸಲರ್ ನೆಹ್ಯಾಮರ್ ಸಹಕಾರದ ಹೊಸ ಮಾರ್ಗಗಳ ಬಗ್ಗೆ ಚರ್ಚಿಸಲಿದ್ದಾರೆ.
ಇದಕ್ಕೂ ಮುನ್ನ ಜುಲೈ 7ರಂದು, ಆಸ್ಟ್ರಿಯಾದ ಚಾನ್ಸಲರ್ ಎಕ್ಸ್’ನಲ್ಲಿ ಬರೆದು, “ಈ ಭೇಟಿ ವಿಶೇಷ ಗೌರವವಾಗಿದೆ. ಯಾಕಂದ್ರೆ, ಇದು ನಲವತ್ತು ವರ್ಷಗಳಲ್ಲಿ ಭಾರತೀಯ ಪ್ರಧಾನಿಯ ಮೊದಲ ಭೇಟಿಯಾಗಿದೆ ಮತ್ತು ನಾವು ಭಾರತದೊಂದಿಗೆ ರಾಜತಾಂತ್ರಿಕ ಸಂಬಂಧಗಳ 75 ವರ್ಷಗಳನ್ನು ಆಚರಿಸುತ್ತಿರುವಾಗ ಮಹತ್ವದ ಮೈಲಿಗಲ್ಲಾಗಿದೆ” ಎಂದು ಬರೆದಿದ್ದಾರೆ.
BREAKING : ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ‘ಗೌತಮ್ ಗಂಭೀರ್’ ನೇಮಕ |Gautam Gambhir
BREAKING : ಟೀಂ ಇಂಡಿಯಾ ನೂತನ ಮುಖ್ಯ ಕೋಚ್ ಆಗಿ ‘ಗೌತಮ್ ಗಂಭೀರ್’ ನೇಮಕ : ‘BCCI’ ಘೋಷಣೆ
ರಾಜಕೀಯ, ಕೋಮುವಾದ ಉದ್ದೇಶದ ಅರ್ಜಿಗಳನ್ನು ಪುರಸ್ಕರಿಸಲಾಗುವುದಿಲ್ಲ : ಹೈಕೋರ್ಟ್ ಮಹತ್ವದ ಆದೇಶ