ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (ಜುಲೈ 13) ಮುಂಬೈಗೆ ಭೇಟಿ ನೀಡಿದ ಸಂದರ್ಭದಲ್ಲಿ ಗೋರೆಗಾಂವ್’ನ ನೆಸ್ಕೊ ವಸ್ತುಪ್ರದರ್ಶನ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ 29,400 ಕೋಟಿ ರೂ.ಗೂ ಹೆಚ್ಚು ವೆಚ್ಚದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಮುಂಬೈ ಮೆಟ್ರೋಪಾಲಿಟನ್ ರೀಜನ್ ಡೆವಲಪ್ಮೆಂಟ್ ಅಥಾರಿಟಿ (MMRDA) ಥಾಣೆ-ಬೋರಿವಾಲಿ ಮತ್ತು ಬಿಎಂಸಿಯ ಗೋರೆಗಾಂವ್ ಮುಲುಂಡ್ ಲಿಂಕ್ ರಸ್ತೆ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
“ಅವರು ಕೇಂದ್ರ ರೈಲ್ವೆಯ ಕಲ್ಯಾಣ್ ಯಾರ್ಡ್ ಮರುನಿರ್ಮಾಣ ಮತ್ತು ನವೀ ಮುಂಬೈನ ತುರ್ಭೆಯಲ್ಲಿ ಗತಿ ಶಕ್ತಿ ಮಲ್ಟಿಮೋಡಲ್ ಕಾರ್ಗೋ ಟರ್ಮಿನಲ್ ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಲೋಕಮಾನ್ಯ ತಿಲಕ್ ಟರ್ಮಿನಸ್ನಲ್ಲಿ ಹೊಸ ವೇದಿಕೆಗಳನ್ನು ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್’ನಲ್ಲಿ ಪ್ಲಾಟ್ಫಾರ್ಮ್ 10 ಮತ್ತು 11ರ ವಿಸ್ತರಣೆಯನ್ನ ಅವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
BREAKING : ರಕ್ಷಣಾ ಸಚಿವ ‘ರಾಜನಾಥ್ ಸಿಂಗ್’ ಆರೋಗ್ಯದಲ್ಲಿ ಚೇತರಿಕೆ ; ಆಸ್ಪತ್ರೆಯಿಂದ ಡಿಸ್ಚಾರ್ಜ್
‘ಯಜಮಾನಿ’ಯರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗುಡ್ ನ್ಯೂಸ್: ‘ಗೃಹಲಕ್ಷ್ಮೀ ಯೋಜನೆ’ ಎಂದಿಗೂ ನಿಲ್ಲಲ್ಲವೆಂದು ಅಭಯ