ಶ್ರೀನಗರ : ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರದ ಗಂಡರ್ಬಾಲ್ ಜಿಲ್ಲೆಯಲ್ಲಿ ಬಹು ನಿರೀಕ್ಷಿತ ಝಡ್- ಮೋರ್ಹ್ ಸುರಂಗವನ್ನು ಉದ್ಘಾಟಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಗಂಡರ್ಬಾಲ್ ಜಿಲ್ಲೆಯಲ್ಲಿ ಝಡ್- ಮೋರ್ಹ್ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಕೇಂದ್ರ ಸಚಿವ ನಿತಿನ್ ಗಡ್ಕರಿ ಉಪಸ್ಥಿತರಿದ್ದರು.
#WATCH | Sonamarg, Jammu & Kashmir: After inaugurating the Z-Morh tunnel, Prime Minister Narendra Modi inspects the tunnel.
CM Omar Abdullah, LG Manoj Sinha and Union Minister Nitin Gadkari are also present.
(Source: DD/ANI) #KashmirOnTheRise pic.twitter.com/FbOP7COfzm
— ANI (@ANI) January 13, 2025
ಝಡ್-ಮೋರ್ಹ್ ಸುರಂಗವು ಜಮ್ಮು ಮತ್ತು ಕಾಶ್ಮೀರದ ಗಂಡರ್ಬಾಲ್ ಜಿಲ್ಲೆಯ ಗಗಾಂಗೀರ್ ಮತ್ತು ಸೋನಾಮಾರ್ಗ್ ಅನ್ನು ಸಂಪರ್ಕಿಸುತ್ತದೆ. ರಂಗವು ಎರಡು ಪಥದ, ದ್ವಿಮುಖ ರಸ್ತೆ ರಚನೆಯಾಗಿದ್ದು, 10 ಮೀಟರ್ ಅಗಲವಿದೆ. ಇದು 6.5 ಕಿ.ಮೀ ವ್ಯಾಪಿಸಿದೆ, ಹೆಚ್ಚುವರಿ 6.05 ಕಿ.ಮೀ ಸಂಪರ್ಕ ರಸ್ತೆಗಳನ್ನು ಹೊಂದಿದೆ. ಈ ಸುರಂಗವು ಸಮುದ್ರ ಮಟ್ಟದಿಂದ 2,637 ಮೀಟರ್ (8,652 ಅಡಿ) ಎತ್ತರದಲ್ಲಿದೆ. ಇದು ಹಿಮಪಾತ ಪೀಡಿತ ಝಡ್-ಟರ್ನ್ ರಸ್ತೆಯನ್ನು ಬದಲಿಸಿ ಸೋನಾಮಾರ್ಗ್ ಗೆ ಎಲ್ಲಾ ಹವಾಮಾನದ ಪ್ರವೇಶವನ್ನು ಒದಗಿಸುತ್ತದೆ.
Jammu & Kashmir: Prime Minister Narendra Modi inaugurated the Z-Morh tunnel in Sonamarg.
(Source: DD/ANI) pic.twitter.com/NfAs22Aflk
— ANI (@ANI) January 13, 2025