ಅಹಮದಾಬಾದ್ : 242 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ವಿಮಾನವು ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕಾಫ್ ಆಗುತ್ತಿರುವಾಗ ಅಪಘಾತಕ್ಕೀಡಾಗಿದೆ. ಏಳು ಅಗ್ನಿಶಾಮಕ ದಳದ ವಾಹನಗಳು ಸ್ಥಳದಲ್ಲಿವೆ. ಹಾನಿಯ ವ್ಯಾಪ್ತಿಯನ್ನು ತೋರಿಸುವ ದೃಶ್ಯಗಳು ಹೊರಬಿದ್ದಿದ್ದು, ಗಾಢ ಹೊಗೆ ಆವರಿಸಿದೆ.
ಅಹಮದಾಬಾದ್ ವಿಮಾನ ನಿಲ್ದಾಣದಿಂದ ವಿಮಾನ ಹಾರಿದ ಸ್ಪಲ್ಪ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಮಾಹಿತಿಯ ಪ್ರಕಾರ, ಈ ವಿಮಾನ ಅಹಮದಾಬಾದ್ನಿಂದ ಲಂಡನ್’ಗೆ ಹೋಗುತ್ತಿದ್ದಾಗ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಹಾರಿದ ಸ್ವಲ್ಪ ಸಮಯದ ನಂತರ ಮೇಘನಿನಗರ ಬಳಿ ಅಪಘಾತಕ್ಕೀಡಾಗಿದೆ.
ವಿಮಾನ ನಿಲ್ದಾಣದಿಂದ ಮೇಘನಿನಗರದ ದೂರ ಸುಮಾರು 15 ಕಿಲೋಮೀಟರ್. ಅಪಘಾತ ಸಂಭವಿಸಿದ ತಕ್ಷಣ, 7 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ತಲುಪಿ ಬೆಂಕಿಯನ್ನು ನಂದಿಸಲು ಪ್ರಾರಂಭಿಸಿವೆ.
BREAKING: Air India Ahmedabad to London flight with 130 passengers aboard crashes minutes after take off. pic.twitter.com/eVIbymeBsq
— Rahul Shivshankar (@RShivshankar) June 12, 2025
BREAKING : ಕರ್ನಾಟಕದಲ್ಲಿ ‘ಜಾತಿಗಣತಿ’ ಮರು ಸಮೀಕ್ಷೆಗೆ ರಾಜ್ಯ ಸಚಿವ ಸಂಪುಟ ಸಭೆ ಅಸ್ತು
BREAKING : ಗುಜರಾತ್ ನ ಅಹಮದಾಬಾದ್ ನಲ್ಲಿ 135 ಪ್ರಯಾಣಿಕರಿದ್ದ ವಿಮಾನ ಪತನ | Plane crash in Ahmedabad