ಬೆಂಗಳೂರು : ವಕ್ಫ್ ಗೆ ಸೇರಿದ್ದ ಜಮೀನು ಒತ್ತುವರಿ ತೆರವು ಕೋರಿ ಸಲ್ಲಿಸಿದ್ದ ಪಿಐಎಲ್ ಅನ್ನು ಹೈಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿದೆ.
ಸೈಯದ್ ಎಜಾಜ್ ಅಹ್ಮದ್ ಎಂಬುವರು ಸಲ್ಲಿಸಿದ್ದ ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ.
ರಾಜ್ಯದಲ್ಲಿ 1.12 ಲಕ್ಷ ಎಕರೆ ಜಮೀನು ಒತ್ತುವಾರಿ ಆಗಿದೆ ಎಂದು ವರದಿಯಿದೆ. ರಾಜಕೀಯ ಕಾರಣಕ್ಕೆ ಸರ್ಕಾರ ಒತ್ತುವರಿ ತೆರವಿಗೆ ತಡೆ ನೀಡಿದೆ. ರೈತರಿಗೆ ನೀಡಿದ್ದ ನೋಟಿಸ್ ಹಿಂಪಡೆದ ಸರ್ಕಾರದ ಕ್ರಮ ಪ್ರಶ್ನಿಸಿ ನ್ಯಾಯಾಂಗ ತನಿಖೆಗೆ ಕೋರಿದ್ದರು. ರೈತರಿಗೆ ನೀಡಿದ್ದ ನೋಟಿಸ್ ಹಿಂಪಡೆದ ಸರ್ಕಾರದ ನಿರ್ಧಾರ ಪ್ರಶ್ನಿಸಿದ್ದರು. ಇದಕ್ಕೆ ಕೋರ್ಟ್ ಕಾಯ್ದೆ ಉಲ್ಲಂಘನೆಯಾಗಿದ್ದರೆ ಪ್ರಶ್ನಿಸಬಹುದು ಎಂದು ಹೇಳಿದೆ.