ಬೆಂಗಳೂರು : ಬೆಂಗಳೂರಿನಲ್ಲಿ ನಟೋರಿಯಸ್ ಮನೆಗಳ್ಳ ಮಾಡುತ್ತಿದ್ದ ಮಂಜ ಅಲಿಯಾಸ್ ಪಾರಿವಾಳ ಮಂಜನನ್ನು ಪೊಲೀಸರು ಬಂಧಿಸಿದ್ದಾರೆ.
ಪಾರಿವಾಳ ಮಂಜ ಮೂಲತಃ ತಮಿಳುನಾಡು ಮೂಲದವನಾಗಿದ್ದು, ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ಮನೆ ಕಳ್ಳತನ ಮಾಡುತ್ತಿದ್ದ. ಇದೀಗ ಪೊಲೀಸರು ಆರೋಪಿ ಮಂಜನನ್ನು ಬಂಧಿಸಿದ್ದು, ಮಂಜನ ಮನೆಯಲ್ಲಿದ್ದ 30 ಲಕ್ಷ ರೂ. ಮೌಲ್ಯದ ಚಿನ್ನದ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಜ ಪಾರಿವಾಳಗಳನ್ನು ಉದ್ದೇಶಪೂರ್ವಕವಾಗಿ ಮನೆಗಳ ಮೇಲೆ ಬಿಟ್ಟು, ಬಳಿಕ ಮನೆ ಮಾಲೀಕರ ಅನುಮತಿ ಪಡೆದು ಕಟ್ಟಡಕ್ಕೆ ಎಂಟ್ರಿ ಕೊಟ್ಟು ಮನೆಯನ್ನಲ್ಲೆ ನೋಡಿಕೊಂಡು ಮನೆಯವರು ಊರಿಗೆ ಹೋದಾಗ ಬೀಗ ಹೊಡೆದು ಕಳ್ಳತನ ಮಾಡುತ್ತಿದ್ದ.