ನವದೆಹಲಿ : ಹಿರಿಯ ಮುಖಂಡ ಪರ್ವೇಶ್ ವರ್ಮಾ ಅವರನ್ನ ಹೊಸ ಉಪಮುಖ್ಯಮಂತ್ರಿಯಾಗಿ ನೇಮಿಸಲಾಗಿದೆ. 2025ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ವರ್ಮಾ ಅವರು ನವದೆಹಲಿ ಸ್ಥಾನದಿಂದ ಎಎಪಿಯ ಅರವಿಂದ್ ಕೇಜ್ರಿವಾಲ್ ಅವರನ್ನ ಸೋಲಿಸುವ ಮೂಲಕ ಗಮನಾರ್ಹ ವಿಜಯವನ್ನ ಗಳಿಸಿದರು.
ವರ್ಮಾ ಸುಮಾರು 30 ವರ್ಷಗಳಿಂದ ಬಿಜೆಪಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಅವ್ರು ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಭಾರತೀಯ ಜನತಾ ಪಕ್ಷದ ಹಿರಿಯ ಉಪಾಧ್ಯಕ್ಷ ಸಾಹಿಬ್ ಸಿಂಗ್ ವರ್ಮಾ ಅವರ ಪುತ್ರ. ಅವರ ಚಿಕ್ಕಪ್ಪ ಆಜಾದ್ ಸಿಂಗ್ ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ನ ಮೇಯರ್ ಆಗಿದ್ದರು ಮತ್ತು ಮುಂಡ್ಕಾದಿಂದ ಬಿಜೆಪಿ ಟಿಕೆಟ್ನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ವರ್ಮಾ ಪಶ್ಚಿಮ ದೆಹಲಿಯಿಂದ ಎರಡು ಬಾರಿ ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಮೆಹ್ರೌಲಿಯನ್ನು ಶಾಸಕರಾಗಿಯೂ ಪ್ರತಿನಿಧಿಸಿದ್ದಾರೆ. 2013ರಲ್ಲಿ ಮೆಹ್ರೌಲಿಯಿಂದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಅವರ ರಾಜಕೀಯ ಪಯಣ ಆರಂಭವಾಯಿತು.
ವಿವಿಧ ಬೇಡಿಕೆ ಈಡೇರಿಸುವಂತೆ ಬಿಬಿಎಂಸಿ ಅಧಿಕಾರಿ, ನೌಕರರ ಸಂಘ ಮುಖ್ಯ ಆಯುಕ್ತರಿಗೆ ಮನವಿ
BREAKING: ಅರವಿಂದ್ ಕೇಜ್ರಿವಾಲ್ ಸೋಲಿಸಿದ ಪರ್ವೇಶ್ ವರ್ಮಾಗೆ ದೆಹಲಿ ಉಪಮುಖ್ಯಮಂತ್ರಿ ಸ್ಥಾನ