ಬೆಂಗಳೂರು : ಮನೆ ಮುಂದೆ ಆಟವಾಡುತ್ತಿದ್ದ ಇಬ್ಬರು ಮಕ್ಕಳು ನಾಪತ್ತೆಯಾಗಿರುವ ಘಟನೆ ಬೆಂಗಳೂರಿನ ಜಯನಗರ 3 ನೇ ಹಂತದ ನಕಲು ಬಂಡೆಯಲ್ಲಿ ನಡೆದಿದೆ.
ಜನವರಿ 18 ರಂದು ಮನೆ ಬಳಿ ಪ್ರವೀಣ್ ಹಾಗೂ ರವಿ ಆಟವಾಡುತ್ತಿದ್ದರು. ಬಳಿಕ ಮಕ್ಕಳು ನಾಪತ್ತೆಯಾಗಿದ್ದಾರೆ. ವಿದ್ಯಾಶ್ರೀ ಹಾಗೂ ಮಹೇಶ್ ದಂಪತಿಯ ಪುತ್ರ ಪ್ರವೀಣ್ ಜಯನಗರದ ಎಂಇಎಸ್ ಶಾಲೆಯಲ್ಲಿ 7 ನೇ ತರಗತಿ ಓದುತ್ತಿದ್ದ. ಮತ್ತೊಬ್ಬ ಬಾಲಕ ರವಿ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.
ಮಕ್ಕಳು ಕಾಣೆಯಾಗಿರುವ ಬಗ್ಗೆ ಪೋಷಕರು ತಿಲಕ್ ನಗರ ಪೊಲೀಸ್ ಠಾಣೆಗೆ ಪ್ರಕರನ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಕ್ಕಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.