ನವದೆಹಲಿ : ಪಹಲ್ಗಾಮ್ ಉಗ್ರ ದಾಳಿ ಬೆನ್ನಲ್ಲೇ ಭಾರತದ ನಿರ್ಧಾರದಿಂದ ಬೆಚ್ಚಿ ಬಿದ್ದಿರುವ ಪಾಕಿಸ್ತಾನ ಇದೀಗ ಪಹಲ್ಗಾಮ್ ದಾಳಿ ಬಗ್ಗೆ ತನಿಖೆಗೆ ಒತ್ತಾಯಿಸಿದೆ.
ಹೌದು, ಪಹಲ್ಗಾಮ್ ಉಗ್ರ ದಾಳಿ ಬಳಿಕ ಭಾರತ ಕೈಗೊಂಡಿರುವ ಕಠಿಣ ನಿರ್ಧಾರದಿಂದ ಬೆದರಿರುವ ಪಾಕಿಸ್ತಾನ, ಪಹಲ್ಗಾಮ್ ದಾಳಿ ಬಗ್ಗೆ ತನಿಖೆಗೆ ಒತ್ತಾಯಿಸಿದೆ. ಅಂತಾರಾಷ್ಟ್ರೀಯ ತನಿಖೆಗೆ ಒತ್ತಾಯಿಸಿದೆ.
ಪಹಲ್ಗಾಮ್ ಉಗ್ರ ದಾಳಿಯನ್ನು ಅಂತಾರಾಷ್ಟ್ರೀಯ ತನಿಖೆ ಮಾಡಿ, ತನಿಖೆಗೆ ಸಹಕಾರ ಕೊಡುತ್ತೇವೆ ಎಂದು ಪಾಕಿಸ್ತಾನ ಹೇಳಿದೆ ಎಂದು ವರದಿಯಾಗಿದೆ.