ನವದೆಹಲಿ : ಪಹಲ್ಗಾಮ್ ಉಗ್ರ ದಾಳಿ ನಡುವೆ ಭಾರತ-ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದ್ದು, ಈ ನಡುವೆ ಪಾಕಿಸ್ತಾನವನ್ನು ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಬೆಂಬಲಿಸಿದ್ದಾನೆ.
ಅಮೆರಿಕ,ಕೆನಡಾದ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಪಾಕ್ ಪರ ಬೇಹುಗಾರಿಕೆ ಮಾಡಿದ್ರೆ ಬಹುಮಾನ ಕೊಡುವುದಾಗಿ ಘೋಷಿಸಿದ್ದಾನೆ.
ಭಾರತೀಯ ಮಿಲಿಟರಿ, ಸೇನಾ ಚಲನವಲನಗಳ ಬಗ್ಗೆ ತಿಳಿಸಿಕೊಟ್ರೆ 11 ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ಹೇಳಿದ್ದಾನೆ. ಭಾರತ ಪಾಕಿಸ್ತಾನದ ಮೇಲೆ ಯುದ್ಧ ಮಾಡಿದರೆ ಸಿಖ್ಖರು ಯುದ್ಧದಲ್ಲಿ ಭಾಗವಹಿಸಬಾರದು ಎಂದು ಅವರು ಕರೆ ನೀಡಿದರು. “ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ, ಅದು ಭಾರತ ಮತ್ತು ಮೋದಿಗೆ ಕೊನೆಯ ಯುದ್ಧವಾಗುತ್ತದೆ.” ಪಂಜಾಬಿಗಳು ಪಾಕಿಸ್ತಾನವನ್ನು ಬೆಂಬಲಿಸುತ್ತಾರೆ. “ಪಂಜಾಬ್ ಪಾಕಿಸ್ತಾನದ ಬೆನ್ನೆಲುಬಾಗಲಿದೆ” ಎಂದು ಅವರು ವೀಡಿಯೊ ಸಂದೇಶದಲ್ಲಿ ಕರೆ ನೀಡಿದ್ದಾನೆ.