ನವದೆಹಲಿ: ರಾಜ್ಯಸಭಾ ಅಧ್ಯಕ್ಷ ಮತ್ತು ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ವಿರುದ್ಧ ವಿಪಕ್ಷ ಮೈತ್ರಿಕೂಟ ಇಂಡಿಯಾ ಬಣವು ಅವಿಶ್ವಾಸ ನಿರ್ಣಯವನ್ನ ಮಂಡಿಸಲು ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಅದ್ರಂತೆ, ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ರಾಜ್ಯಸಭೆಯಲ್ಲಿ ಇಂಡಿಯಾ ಬಣದ ನಾಯಕರು ಈವರೆಗೆ 50 ಕ್ಕೂ ಹೆಚ್ಚು ಸಂಸದರು ನಿರ್ಣಯಕ್ಕೆ ಸಹಿ ಹಾಕಿದ್ದಾರೆ ಎಂದು ವಿರೋಧ ಪಕ್ಷದ ನಾಯಕರು ಹೇಳಿದ್ದಾರೆ. ಇನ್ನು ಇಂಡಿಯಾ ಬಣದ ಎಲ್ಲಾ ಪಕ್ಷಗಳಲ್ಲಿ ಇದಕ್ಕೆ ಒಮ್ಮತವಿದೆ.
ರಾಜ್ಯಸಭೆಯಲ್ಲಿ ಧನ್ಕರ್ ಅವರು ಕಲಾಪಗಳನ್ನು ನಿರ್ವಹಿಸಿದ ಬಗ್ಗೆ ವಿರೋಧ ಪಕ್ಷದ ನಾಯಕರಲ್ಲಿ ಹೆಚ್ಚುತ್ತಿರುವ ಅಸಮಾಧಾನವನ್ನು ಈ ಕ್ರಮವು ಪ್ರತಿಬಿಂಬಿಸುತ್ತದೆ. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ (ಟಿಎಂಸಿ), ಆಮ್ ಆದ್ಮಿ ಪಕ್ಷ (ಎಎಪಿ), ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಇತರ ಬಿಜೆಪಿ ಬಣದ ಸದಸ್ಯರು ನಿರ್ಣಯದೊಂದಿಗೆ ಮುಂದುವರಿಯುವ ನಿರ್ಧಾರದಲ್ಲಿ ಒಗ್ಗಟ್ಟಾಗಿದ್ದಾರೆ ಎಂದು ವರದಿಯಾಗಿದೆ.
BREAKING : ‘ಲೋಕಸಭೆ, ರಾಜ್ಯಸಭೆ’ ನಾಳೆಗೆ ಮುಂದೂಡಿಕೆ |Rajya Sabha, Lok Sabha adjourned
BREAKING: ನಾಳೆಯಿಂದ ಬೆಳಗ್ಗೆ 10 ರಿಂದ ಸಂಜೆ 7ರವರೆಗೆ ವಿಧಾನಸಭೆ ಕಲಾಪ ನಡೆಸಲು ತೀರ್ಮಾನ