ನವದೆಹಲಿ :ಭಾರತೀಯ ಸೇನೆಯ ‘ಆಪರೇಷನ್ ಸಿಂಧೂರ್’ ದಾಳಿಗೆ ಉಗ್ರ ಮಸೂದ್ ಕುಟುಂಬದ 14 ಮಂದಿ ಬಲಿಯಾಗಿದ್ದಾರೆ. ಮಸೂದ್ ಅಝರ್ ಸಹೋದರ , ಸಹೋದರಿ ಸೇರಿ 14 ಮಂದಿ ಬಲಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಉಗ್ರ ಮಸೂದ್ ಸಹೋದರ, ಸಹೋದರಿ ಸೇರಿದಂತೆ ಕುಟುಂಬದ 14 ಮಂದಿ ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಸೇನೆಯ ತಡರಾತ್ರಿ ಪಾಕಿಸ್ತಾನದ JEM ಉಗ್ರ ಸಂಘಟನೆ ಸೇರಿದಂತೆ 21ಉಗ್ರ ನೆಲೆಗಳ ಮೇಲೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಮೂಲಕ ಏರ್ ಸ್ಟ್ರೈಕ್ ಮಾಡಿದೆ ಎಂದು ಕರ್ನಲ್ ಸೋಫಿಯಾ ಖುರೇಷಿ ಹೇಳಿದ್ದಾರೆ.
#WATCH |Delhi | #OperationSindoor| Wing Commander Vyomika Singh says, "Operation Sindoor was launched by the Indian Armed Forces to deliver justice to the victims of the Pahalgam terror attack and their families. Nine terrorist camps were targeted and successfully destroyed…… pic.twitter.com/Gmw6WHrYVO
— ANI (@ANI) May 7, 2025
#WATCH | Delhi | #OperationSindoor| Col. Sofiya Qureshi, while addressing the media, presents videos showing multiple hits on the Mundrike and other terrorist camps in Pakistan and PoJK. pic.twitter.com/Ih21EklEe5
— ANI (@ANI) May 7, 2025
ಇನ್ನೂ ಪಹಲ್ಗಾಮ್ ಉಗ್ರ ದಾಳಿಯನ್ನು “ರೆಸಿಸ್ಟೆನ್ಸ್ ಫ್ರಂಟ್ ಎಂಬ ಗುಂಪು ಪಹಲ್ಗಾಮ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಈ ಗುಂಪು ಲಷ್ಕರ್-ಎ ತೈಬಾ ಜೊತೆ ಸಂಪರ್ಕ ಹೊಂದಿದೆ. ಈ ದಾಳಿಯಲ್ಲಿ ಪಾಕಿಸ್ತಾನದ ಸಂಪರ್ಕಗಳು ಸ್ಥಾಪಿತವಾಗಿವೆ” ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದಾರೆ.
ಕುಟುಂಬಕ್ಕೆ ಬೆದರಿಕೆ ಹಾಕಲಾಯಿತು ಮತ್ತು ಆ ಅನಾಗರಿಕತೆಯ ಸಂದೇಶವನ್ನು ತಿಳಿಸಲು ಹೇಳಲಾಯಿತು. ಜೆ & ಕೆ ನಲ್ಲಿ ಪ್ರವಾಸೋದ್ಯಮ ಮತ್ತೆ ಅಭಿವೃದ್ಧಿ ಹೊಂದುತ್ತಿರುವುದರಿಂದ, ದಾಳಿಯ ಮುಖ್ಯ ಉದ್ದೇಶ ಅದನ್ನು ಹಾನಿಗೊಳಿಸುವುದಾಗಿತ್ತು ಎಂದು ಹೇಳಿದ್ದಾರೆ.
ಏಪ್ರಿಲ್ 25 ರಂದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮಾಧ್ಯಮ ಪ್ರಕಟಣೆಯಿಂದ ಟಿಆರ್‌ಎಫ್ ಉಲ್ಲೇಖವನ್ನು ತೆಗೆದುಹಾಕಲು ಪಾಕಿಸ್ತಾನದ ಒತ್ತಡವನ್ನು ನಿರ್ಲಕ್ಷಿಸಬಾರದು. ಪಹಲ್ಗಾಮ್ ಭಯೋತ್ಪಾದಕ ದಾಳಿಯು ಭಯೋತ್ಪಾದಕರೊಂದಿಗೆ ಪಾಕಿಸ್ತಾನದ ಸಂಪರ್ಕವನ್ನು ಬಹಿರಂಗಪಡಿಸಿದೆ ಎಂದು ತಿಳಿಸಿದ್ದಾರೆ.
“ಭಯೋತ್ಪಾದಕ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುತ್ತಿರುವ ನಮ್ಮ ಗುಪ್ತಚರ ಸಂಸ್ಥೆಗಳು ಭಾರತದ ಮೇಲೆ ಹೆಚ್ಚಿನ ದಾಳಿಗಳು ನಡೆಯಬಹುದು ಎಂದು ಸೂಚಿಸಿವೆ ಮತ್ತು ಅವುಗಳನ್ನು ನಿಲ್ಲಿಸುವುದು ಮತ್ತು ನಿಭಾಯಿಸುವುದು ಅತ್ಯಗತ್ಯವೆಂದು ಭಾವಿಸಲಾಗಿದೆ” ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದಾರೆ.