ಶ್ರೀನಗರ : ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಆಪರೇಷನ್ ಸಿಂಧೂರು ಹೆಸರಿನಲ್ಲಿ ಪಾಕ್ ಉಗ್ರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.
ಹೌದು, ಪಾಕ್ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ಕ್ಷಿಪಣಿ ದಾಳಿ ನಡೆಸಿದ್ದು, 9 ಉಗ್ರರ ನೆಲೆಗಳನ್ನು ದ್ವಂಸಗೊಳಿಸಿದೆ. ಪಾಕಿಸ್ತಾನದ 4 ಉಗ್ರ ನೆಲೆಗಳು, ಪಿಒಕೆಯ 5 ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದೆ.
ಕೊಟ್ಲಿ, ಬಹವಾಲ್ಪುರ್, ಮುಜಾಫರ್ ಬಾದ್, ಗುಲ್ಫರ್, ಭೀಂಬರ್, ಬಾಘ್, ಸಿಯಾಲ್ ಕೋಟ್, ಮುರಿದ್ಕೆ, ಚಕಾಮ್ರ ಮೇಲೆ ದಾಳಿ ನಡೆಸಿದೆ. ಆಪರೇಷನ್ ಸಿಂಧೂರ್ ಹೆಸರಿನಲ್ಲಿ ರಾತ್ರಿ 1.30 ಕ್ಕೆ ಭಾರತೀಯ ಸೇನೆ ದಾಳಿ ನಡೆಸಿದೆ.
ಭಾರತೀಯ ಪಡೆಗಳು ಯಶಸ್ವಿಯಾಗಿ ಹೊಡೆದುರುಳಿಸಿದ ಒಂಬತ್ತು ಗುರಿಗಳಲ್ಲಿ ನಾಲ್ಕು ಪಾಕಿಸ್ತಾನದಲ್ಲಿ ಮತ್ತು ಐದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿವೆ. ಪಾಕಿಸ್ತಾನದಲ್ಲಿರುವ ಗುರಿಗಳಲ್ಲಿ ಬಹಾವಲ್ಪುರ್, ಮುರಿಡ್ಕೆ ಮತ್ತು ಸಿಯಾಲ್ಕೋಟ್ ಸೇರಿವೆ. ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಲು ವಿಶೇಷ ನಿಖರ ಯುದ್ಧಸಾಮಗ್ರಿಗಳನ್ನು ಬಳಸಲಾಯಿತು. ಮೂರು ಸೇವೆಗಳು ಜಂಟಿಯಾಗಿ ಕಾರ್ಯಾಚರಣೆ ಮತ್ತು ಸ್ವತ್ತುಗಳು ಮತ್ತು ಪಡೆಗಳ ಸಜ್ಜುಗೊಳಿಸುವಿಕೆಯನ್ನು ನಡೆಸಿದವು ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿ ಘೋಷಣೆ.!
ಭಾರತದ ಸೇನೆ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ತುರ್ತು ಸೇವೆ ಹೊರತುಪಡಿಸಿ ಎಲ್ಲಾ ಸೇವೆಗಳನ್ನು ಬಂದ್ ಮಾಡಲಾಗಿದೆ.
#OperationSindoor | Of the nine targets successfully hit by the Indian forces, four are in Pakistan and five in Pakistan-occupied Kashmir. The targets in Pakistan include Bahawalpur, Muridke and Sialkot. Special precision munitions were used to target the terror camps. The three… pic.twitter.com/8tEwuI9w77
— ANI (@ANI) May 6, 2025