ತುಮಕೂರು : ರಾಜ್ಯದಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ತುಮಕೂರಿನಲ್ಲಿ ಹೃದಯಾಘಾತದಿಂದ ಕರ್ತವ್ಯನಿರತ ನರ್ಸ್ ಬಲಿಯಾಗಿದ್ದಾರೆ.
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಕುಸಿದುಬಿದ್ದು ನರ್ಸ್ ಲತಾ (37) ಸಾವನ್ನಪ್ಪಿದ್ದಾರೆ. ನಿನ್ನೆ ರಾತ್ರಿ ಪಾಳಿ ಕರ್ತವ್ಯಕ್ಕೆ ಹಾಜರಾಗಿದ್ದ ಲತಾ ಅವರು ಊಟ ಮುಗಿಸಿಕೊಂಡು ವಾಶ್ ರೂಂ ಬಳಿ ಹೋದಾಗ ಸುಸ್ತಾಗಿದ್ದರು. ಈ ವೇಳೆ ಚಿಕಿತ್ಸೆ ನೀಡುತ್ತಿದ್ದಂತೆಯೇ ಮೃತಪಟ್ಟಿದ್ದಾರೆ.
ನರ್ಸ್ ಲತಾ ತುಮಕೂರು ತಾಲೂಕಿನ ಹಿರೇಹಳ್ಳಿ ನಿವಾಸಿಯಾಗಿದ್ದಾರೆ. ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.