ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಖ್ಯಾತ ತಬಲಾ ವಾದಕ ಉಸ್ತಾದ್ ಜಾಕೀರ್ ಹುಸೇನ್ ಅವರು ವಿಧಿವಶರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
73 ವಯಸ್ಸಿನ ಜಾಕಿರ್ ಅವ್ರನ್ನ ಇತ್ತಿಚಿಗಷ್ಟೇ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವ್ರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು. ಸಧ್ಯ ಜಾಕೀರ್ ಹುಸೇನ್ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
ಅಂದ್ಹಾಗೆ, ಜಾಕೀರ್ ಹುಸೇನ್ ಅವ್ರ ಹೆಸರನ್ನ ಸಂಗೀತ ಜಗತ್ತಿನಲ್ಲಿ ಗೌರವದಿಂದ ತೆಗೆದುಕೊಳ್ಳಲಾಗುತ್ತದೆ. 9 ಮಾರ್ಚ್ 1951 ರಂದು ಮುಂಬೈನಲ್ಲಿ ಜನಿಸಿದ ಉಸ್ತಾದ್ ಜಾಕಿರ್ ಹುಸೇನ್ ಅವರಿಗೆ 1988ರಲ್ಲಿ ಪದ್ಮಶ್ರೀ, 2002ರಲ್ಲಿ ಪದ್ಮಭೂಷಣ ಮತ್ತು 2023ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನ ನೀಡಲಾಯಿತು. ಜಾಕಿರ್ ಹುಸೇನ್ ಮೂರು ಗ್ರ್ಯಾಮಿ ಪ್ರಶಸ್ತಿಗಳನ್ನ ಸಹ ಪಡೆದಿದ್ದಾರೆ.
ನಾವು ಇನ್ನೂ ಭಯೋತ್ಪಾದನೆಯನ್ನ ಅತ್ಯಂತ ಗಂಭೀರ ಪ್ರಮಾಣದಲ್ಲಿ ಎದುರಿಸುತ್ತಿದ್ದೇವೆ : ಎಸ್. ಜೈಶಂಕರ್
ಕಾಫಿ ಪ್ರಿಯರಿಗೆ ಸಿಹಿ ಸುದ್ದಿ ; 3 ಕಪ್ ಕಾಫಿ ನಿಮ್ಮ ‘ಜೀವಿತಾವಧಿ’ ಹೆಚ್ಚಿಸುತ್ತೆ ; ಅಧ್ಯಯನ
ಲೋಕಸಭೆಯಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆ ಮಂಡನೆಯನ್ನು ಮುಂದೂಡಿದ ಕೇಂದ್ರ ಸರ್ಕಾರ
ನಾವು ಇನ್ನೂ ಭಯೋತ್ಪಾದನೆಯನ್ನ ಅತ್ಯಂತ ಗಂಭೀರ ಪ್ರಮಾಣದಲ್ಲಿ ಎದುರಿಸುತ್ತಿದ್ದೇವೆ : ಎಸ್. ಜೈಶಂಕರ್