ನವದೆಹಲಿ : ಪಾಕಿಸ್ತಾನದೊಂದಿಗಿನ ಸಂಘರ್ಷದ ಮಧ್ಯೆ ಭಾರತ ಮತ್ತು ಅಮೆರಿಕ ನಡುವಿನ ಚರ್ಚೆಯ ಯಾವುದೇ ಹಂತದಲ್ಲಿ ವ್ಯಾಪಾರಕ್ಕೆ ಯಾವುದೇ ಸಂಬಂಧವಿಲ್ಲ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಸೋಮವಾರ ಲೋಕಸಭೆಗೆ ಮಾಹಿತಿ ನೀಡಿದರು. ಎರಡೂ ಕಡೆಯ ಹೋರಾಟವನ್ನು ತಡೆಯಲು ಅವರು ವ್ಯಾಪಾರವನ್ನ ಬಳಸಿದ್ದಾರೆ ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುನರಾವರ್ತಿತ ಹೇಳಿಕೆಗಳನ್ನ ಅವರು ತಳ್ಳಿಹಾಕಿದರು.
ಲೋಕಸಭೆಯಲ್ಲಿ ಮಾತನಾಡಿದ ಜೈಶಂಕರ್, ಏಪ್ರಿಲ್ 22 ಮತ್ತು ಜೂನ್ 17ರ ನಡುವೆ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ಮೋದಿ ನಡುವೆ ಯಾವುದೇ ಫೋನ್ ಕರೆ ನಡೆದಿಲ್ಲ ಎಂದು ಪ್ರತಿಪಾದಿಸಿದರು.
ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತವು ಅಮೆರಿಕದೊಂದಿಗೆ ನಡೆಸಿದ ಚರ್ಚೆಗಳ ಬಗ್ಗೆ ಬೆಳಕು ಚೆಲ್ಲುತ್ತಾ, ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪ್ರಧಾನಿ ಮೋದಿಯವರಿಗೆ ಕರೆ ಮಾಡಿ ಪಾಕಿಸ್ತಾನದಿಂದ ಭಾರಿ ದಾಳಿಯ ಬಗ್ಗೆ ಎಚ್ಚರಿಕೆ ನೀಡಿದ್ದರು – ಅದಕ್ಕೆ ಮೋದಿ ಭಾರತವು ಇನ್ನಷ್ಟು ಬಲವಾಗಿ ಪ್ರತಿಕ್ರಿಯಿಸುತ್ತದೆ ಎಂದು ಉತ್ತರಿಸಿದರು.
ಮೇ 9 ಮತ್ತು 10 ರಂದು ಪಾಕಿಸ್ತಾನದಿಂದ ಪುನರಾವರ್ತಿತ ದಾಳಿಗಳನ್ನು ಭಾರತ ಯಶಸ್ವಿಯಾಗಿ ವಿಫಲಗೊಳಿಸಿದೆ ಎಂದು ಜೈಶಂಕರ್ ನಂತರ ಹೇಳಿದ್ದಾರೆ.
ಇವತ್ತಿನ ದಿನ ತುಂಬಾನೇ ವಿಶೇಷ.! ನೀವು ಹೀಗೆ ಪೂಜಿಸಿದ್ರೆ ಶಿವನ ಕೃಪೆ ಸಿಗೋದು ಶತಸಿದ್ಧ
ರಾಜ್ಯದಲ್ಲಿ ರೈತರಿಗೆ ಬೇಕಾದ ಯೂರಿಯಾ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸರ್ಕಾರ ವಿಫಲ: ಕೆ.ಅಭಿನಂದನ್ ಕಿಡಿ
ಮದ್ದೂರಿಗೆ ಮೆಟ್ರೋ, ಏರ್ಪೋರ್ಟ್ ಬೇಡ ರೈತರಿಗೆ ನೀರಾವರಿ ಯೋಜನೆ ಕೊಡಿ: ಸಿಎಂಗೆ ಶಾಸಕ ಕೆ.ಎಂ.ಉದಯ್ ಬೇಡಿಕೆ