ನವದೆಹಲಿ : ಎಫ್-35 ಯುದ್ಧ ವಿಮಾನಗಳ ಖರೀದಿ ಕುರಿತು ಅಮೆರಿಕದೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸಂಸತ್ತಿಗೆ ತಿಳಿಸಿದೆ. ಕಾಂಗ್ರೆಸ್ ಸಂಸದ ಬಲವಂತ್ ಬಸವಂತ್ ವಾಂಖಡೆ ಅವರಿಗೆ ಲಿಖಿತ ಉತ್ತರ ನೀಡಿದ ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರು, ಈ ವಿಷಯದ ಕುರಿತು ಭಾರತ ಇನ್ನೂ ಅಮೆರಿಕದೊಂದಿಗೆ “ಔಪಚಾರಿಕ ಚರ್ಚೆ” ನಡೆಸಿಲ್ಲ ಎಂದು ಹೇಳಿದರು.
ಅಮರಾವತಿಯ ಕಾಂಗ್ರೆಸ್ ಸಂಸದ ವಾಂಖಡೆ, ಐದನೇ ತಲೆಮಾರಿನ ರಹಸ್ಯ ವಿಮಾನವಾದ ಎಫ್-35 ಯುದ್ಧ ವಿಮಾನಗಳ ಮಾರಾಟಕ್ಕಾಗಿ ಅಮೆರಿಕ ಭಾರತಕ್ಕೆ ಔಪಚಾರಿಕ ಪ್ರಸ್ತಾಪವನ್ನ ಮಾಡಿದೆಯೇ ಎಂದು ಕೇಳಿದ್ದರು.
“ಫೆಬ್ರವರಿ 13, 2025 ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಪ್ರಧಾನಿ ಸಭೆಯ ನಂತರದ ಭಾರತ-ಯುಎಸ್ ಜಂಟಿ ಹೇಳಿಕೆಯಲ್ಲಿ ಐದನೇ ತಲೆಮಾರಿನ ಯುದ್ಧ ವಿಮಾನಗಳನ್ನು (ಎಫ್-35 ನಂತಹ) ಮತ್ತು ನೀರೊಳಗಿನ ವ್ಯವಸ್ಥೆಗಳನ್ನ ಭಾರತಕ್ಕೆ ಬಿಡುಗಡೆ ಮಾಡುವ ಬಗ್ಗೆ ಅಮೆರಿಕ ತನ್ನ ನೀತಿಯನ್ನು ಪರಿಶೀಲಿಸಲಿದೆ ಎಂದು ಉಲ್ಲೇಖಿಸಲಾಗಿದೆ. ಈ ವಿಷಯದ ಬಗ್ಗೆ ಇನ್ನೂ ಯಾವುದೇ ಔಪಚಾರಿಕ ಚರ್ಚೆಗಳು ನಡೆದಿಲ್ಲ” ಎಂದು ಅವರು ಹೇಳಿದರು.
ಉದ್ಯೋಗ ವಾರ್ತೆ: ‘10,277 IBPS ಕ್ಲರ್ಕ್ ಹುದ್ದೆ’ಗಳಿಗೆ ಅಧಿಸೂಚನೆ, 24,000 ಸಂಬಳ | IBPS Clerk Notification
ಬೆಂಗಳೂರು ಜನರನ್ನು ಸರಕಾರ ಕೊಳ್ಳೆ: ಎ-ಖಾತ, ಬಿ-ಖಾತ ಬೋಗಸ್- ಹೆಚ್.ಎಂ.ರಮೇಶ್ ಗೌಡ ಕಿಡಿ
ಯಾವ್ದೇ ಟೆನ್ಷನ್ ಇಲ್ಲ, ಮೀಟಿಂಗ್ ಇಲ್ಲ, ತಿಂಗಳಿಗೆ 2 ಲಕ್ಷ ರೂ. ಸಂಪಾದಿಸ್ತಿರುವ ಅಡುಗೆಯವ