ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಮತ್ತು ಭಾರತೀಯ ಜನತಾ ಪಕ್ಷದ (BJP) ಹಿರಿಯ ಮುಖಂಡ ನಿತಿನ್ ಗಡ್ಕರಿ ಆರೋಗ್ಯದಲ್ಲಿ ಏರುಪೇರಾಗಿದೆ. ಬುಧವಾರ ಮಹಾರಾಷ್ಟ್ರದ ಯವತ್ಮಾಲ್ನಲ್ಲಿ ಲೋಕಸಭಾ ಚುನಾವಣಾ ರ್ಯಾಲಿಯಲ್ಲಿ ಭಾಷಣ ಮಾಡುವಾಗ ಪ್ರಜ್ಞೆ ತಪ್ಪಿದ್ದಾರೆ.

ಮೂಲಗಳು ಮತ್ತು ದೃಶ್ಯಗಳ ಪ್ರಕಾರ, ಯವತ್ಮಾಲ್ನ ಪುಸಾದ್ನಲ್ಲಿ ಭಾಷಣ ಮಾಡುವಾಗ ಗಡ್ಕರಿಯವ್ರಿಗೆ ಇದ್ದಕ್ಕಿದ್ದಂತೆ ತಲೆ ತಿರುಗಿದಂತಾಗಿದ್ದು, ಕೆಳಗೆ ಬಿದ್ದಿದ್ದಾರೆ.

ಅವರ ಪಕ್ಷದ ಕಾರ್ಯಕರ್ತರು ಅವರ ಮುಖದ ಮೇಲೆ ನೀರು ಚಿಮುಕಿಸಿ ವೇದಿಕೆಯಿಂದ ಕರೆದೊಯ್ದರು. ನಂತರ ವೈದ್ಯಕೀಯ ನೆರವು ನೀಡಲು ಕರೆದೊಯ್ದರು.

ಮಹಾರಾಷ್ಟ್ರದ ಬುಲ್ಧಾನಾ, ಅಕೋಲಾ, ಅಮರಾವತಿ, ವಾರ್ಧಾ, ಹಿಂಗೋಲಿ, ನಾಂದೇಡ್ ಮತ್ತು ಪರ್ಭಾನಿ ಜೊತೆಗೆ ಏಪ್ರಿಲ್ 26 ರಂದು (ಶುಕ್ರವಾರ) ಲೋಕಸಭಾ ಚುನಾವಣೆಯ ಎರಡನೇ ಹಂತದಲ್ಲಿ ಯವತ್ಮಾಲ್ನಲ್ಲಿ ಮತದಾನ ನಡೆಯಲಿದೆ.

ರಾಜ್ಯದ ಪೂರ್ವ-ಮಧ್ಯ ಭಾಗದಲ್ಲಿರುವ ವಿದರ್ಭದಲ್ಲಿರುವ ಯವತ್ಮಾಲ್ ತೀವ್ರ ಶಾಖದ ಪರಿಸ್ಥಿತಿಗಳನ್ನು ಎದುರಿಸುತ್ತಿದೆ. ಹವಾಮಾನ ಇಲಾಖೆ ಏಪ್ರಿಲ್ 27 ರಿಂದ 29 ರವರೆಗೆ ಮಹಾರಾಷ್ಟ್ರದ ಹಲವಾರು ಭಾಗಗಳಿಗೆ ಬಿಸಿಗಾಳಿ ಎಚ್ಚರಿಕೆ ನೀಡಿದೆ.

 

BIG NEWS: ಏ.26ರಂದು ‘ಲೋಕಸಭಾ ಚುನಾವಣೆ’ಗೆ ಮತದಾನ: ರಾಜ್ಯ ಸರ್ಕಾರದಿಂದ ‘ಸಾರ್ವತ್ರಿಕ ರಜೆ’ ಘೋಷಿಸಿ ಆದೇಶ

BIG NEWS: ಏ.26ರಂದು ‘ಲೋಕಸಭಾ ಚುನಾವಣೆ’ಗೆ ಮತದಾನ: ರಾಜ್ಯ ಸರ್ಕಾರದಿಂದ ‘ಸಾರ್ವತ್ರಿಕ ರಜೆ’ ಘೋಷಿಸಿ ಆದೇಶ

BREAKING : ‘ಕೊಟಕ್ ಮಹೀಂದ್ರಾ ಬ್ಯಾಂಕ್’ಗೆ ಬಿಗ್ ಶಾಕ್ : ‘ಹೊಸ ಗ್ರಾಹಕರ ಆನ್ಬೋರ್ಡ್’ಗೆ ‘RBI’ ನಿಷೇಧ

Share.
Exit mobile version