ಬೆಂಗಳೂರು: ಏಪ್ರಿಲ್.26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದೆ. ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡೋದಕ್ಕಾಗಿ ರಾಜ್ಯ ಸರ್ಕಾರದಿಂದ ಸಾರ್ವತ್ರಿಕ ರಜೆ ಘೋಷಣೆ ಮಾಡಿ ಆದೇಶಿಸಿದೆ.

ಈ ಕುರಿತಂತೆ ಕಾರ್ಮಿಕ ಆಯುಕ್ತರಿಂದ ಆದೇಶ ಹೊರಡಿಸಿದ್ದು,ಭಾರತ ಚುನಾವಣಾ ಆಯೋಗವು 2024ರ ಲೋಕಸಭಾ ಚುನಾವಣೆಯನ್ನು ದಿನಾಂಕ:16-03-2024ರಂದು ಘೋಷಿಸಿದ್ದು ಅದರಂತೆ ಕರ್ನಾಟಕ ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಿಗಧಿಯಾಗಿರುತ್ತದೆ. ದಿನಾಂಕ:26-04-2024 (ಶುಕ್ರವಾರ) ರಂದು ಮೊದಲನೇಯ ಹಂತ ಹಾಗೂ ದಿನಾಂಕ:07-05-2024 (ಮಂಗಳವಾರ) ರಂದು ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯಲಿದ್ದು, ದ.ಕ. ಜಿಲ್ಲೆಯಲ್ಲಿ ದಿನಾಂಕ:26.04.2024 (ಶುಕ್ರವಾರ) ರಂದು ನಿಗಧಿಯಾಗಿರುತ್ತದೆ ಎಂದಿದೆ.

ಸದರಿ ದಿನಾಂಕದಂದು ಮತದಾನ ನಡೆಯಲಿರುವ ಕ್ಷೇತ್ರದ ವ್ಯಾಪ್ತಿಯಲ್ಲಿ ನೋಂದಾಯಿತರಾದ ಅರ್ಹ ಮತದಾರರಾಗಿರುವ ಎಲ್ಲಾ ಅರ್ಹ ಕಾರ್ಮಿಕರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಸಂಬಂಧಪಟ್ಟ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳು ಮತ್ತು ಇತರೆ ಸಂಸ್ಥೆಗಳು 1963ರ ಕರ್ನಾಟಕ ಔದ್ಯೋಗಿಕ ಸಂಸ್ಥೆಗಳ (ರಾಷ್ಟ್ರೀಯ ಹಾಗೂ ಹಬ್ಬದ ರಜಾದಿನಗಳು) ಕಾಯ್ದೆಯ ಕಲಂ 3-ಎ ಪುಕಾರ ಮತ ಚಲಾಯಿಸಲು ಅವಕಾಶ ಮಾಡಿ ಕೊಡಬೇಕಾಗುತ್ತದೆ. ಆದ್ದರಿಂದ, ಮತದಾನ ನಡೆಯಲಿರುವ ಕ್ಷೇತ್ರದಲ್ಲಿ ಅರ್ಹರಿರುವ ಎಲ್ಲಾ ಕಾರ್ಮಿಕ ಮತದಾರರಿಗೆ ದಿನಾಂಕ:26-04-2024 ರಂದು ವೇತನ ಸಹಿತ ರಜೆ ನೀಡಿ, ಎಲ್ಲಾ ಅರ್ಹ ಕಾರ್ಮಿಕರು ಸಂವಿಧಾನಾತ್ಮಕ/ಶಾಸನಾತ್ಮಕ ಹಕ್ಕಾದ ಮತವನ್ನು ಚಲಾಯಿಸಲು ಅನುವು ಮಾಡಿಕೊಡಲು ಸೂಚಿಸಿದ್ದಾರೆ.

ಈ ವಿಷಯದಲ್ಲಿ ಅರ್ಹ ಯಾವುದೇ ಕಾರ್ಮಿಕರಿಗೆ ಸಂವಿಧಾನಾತ್ಮಕ/ಶಾಸನಾತ್ಮಕ ಹಕ್ಕಾದ ಮತವನ್ನು ಚಲಾಯಿಸಲು ರಜೆ ನೀಡದೆ ಹಾಗೂ ಮತದಾನಕ್ಕೆ ಅವಕಾಶ ಮಾಡಿಕೊಡದಿದ್ದಲ್ಲಿ ಅಂತಹ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳು ಮತ್ತು ಇತರೆ ಸಂಸ್ಥೆಗಳ ವಿರುದ್ಧ 1963ರ ಕರ್ನಾಟಕ ಔದ್ಯೋಗಿಕ ಸಂಸ್ಥೆಗಳ (ರಾಷ್ಟ್ರೀಯ ಹಾಗೂ ಹಬ್ಬದ ರಜಾ ದಿನಗಳು) ಕಾಯ್ದೆಯ ಕಲಂ 3-ಎ ಹಾಗೂ 1951ರ ಪುಜಾಪ್ರಾತಿನಿಧ್ಯ ಕಾಯ್ದೆಯ ಕಲಂ 135(ಬಿ) ಉಲ್ಲಂಘನೆಗಳಿಗಾಗಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು. ಈ ಬಗ್ಗೆ ದಿನಾಂಕ:18.04.2024ರಂದು ಪತ್ರಿಕಾ ಪುಕಟಣೆಯನ್ನು ಹೊರಡಿಸಿ ಅರಿವು ಮೂಡಿಸಲಾಗಿದೆ ಎಂದು ಹೇಳಿದೆ.

ಆದುದರಿಂದ ತಮ್ಮ ಸಂಘದ ಎಲ್ಲಾ ಸದಸ್ಯರಿಗೆ ಈ ಮಾಹಿತಿಯನ್ನು ಕಳುಹಿಸಿ ಮತದಾನದ ದಿನದಂದು ಎಲ್ಲಾ ಅರ್ಹ ಕಾರ್ಮಿಕರು ಮತ ಚಲಾಯಿಸಲು ಅನುವು ಮಾಡಿಕೊಡಬೇಕೆಂದು ಈ ಮೂಲಕ ತಿಳಿಸಲಾಗಿದೆ.

ಸಾರ್ವಜನಿಕರೇ ಎಚ್ಚರ : ವಾಟ್ಸಪ್ ನಿಂದ ‘ಸ್ಟಾಕ್ ಮಾರ್ಕೆಟ್’ ಆಪ್ ಡೌನ್ಲೋಡ್ ಮಾಡಿಕೊಂಡು 5.2 ರೂ. ಕಳೆದುಕೊಂಡ ಬೆಂಗಳೂರಿನ ವ್ಯಕ್ತಿ!

WhatsApp Updates:ಶೀಘ್ರದಲ್ಲೇ ವಾಟ್ಸಪ್ ನಲ್ಲಿ ಮೊಬೈಲ್ ಸಂಖ್ಯೆಯನ್ನು ಉಳಿಸದೆ ಕರೆ ಮಾಡುವ ಸೌಲಭ್ಯ

Share.
Exit mobile version