ನವದೆಹಲಿ: ದೂರಗಾಮಿ ನಿರ್ಭಯ್ ಕ್ರೂಸ್ ಕ್ಷಿಪಣಿಯನ್ನು ಒಡಿಶಾ ಕರಾವಳಿಯಲ್ಲಿ ಗುರುವಾರ ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಇಂಡಿಜಿನಿಯಸ್ ಟೆಕ್ನಾಲಜಿ ಕ್ರೂಸ್ ಮಿಸೈಲ್ (ಐಟಿಸಿಎಂ) ಎಂದೂ ಕರೆಯಲ್ಪಡುವ ಈ ಕ್ಷಿಪಣಿಯು ದೇಶೀಯ ಪ್ರೊಪಲ್ಷನ್ ಸಿಸ್ಟಮ್ ಮತ್ತು ಮಾಣಿಕ್ ಟರ್ಬೊಫಾನ್ ಎಂಜಿನ್ ಅನ್ನು ಹೊಂದಿದೆ.
ಈ ಕ್ಷಿಪಣಿಯನ್ನು ಬೆಂಗಳೂರು ಮೂಲದ ಡಿಆರ್ಡಿಒ ಪ್ರಯೋಗಾಲಯ ಏರೋನಾಟಿಕಲ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ (ಎಡಿಇ) ದೇಶೀಯವಾಗಿ ಅಭಿವೃದ್ಧಿಪಡಿಸಿದೆ.ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಒಡಿಶಾ ಕರಾವಳಿಯ ಚಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್) ನಿಂದ ಈ ಪರೀಕ್ಷೆಯನ್ನು ನಡೆಸಿತು. ಈ ಯಶಸ್ವಿ ಹಾರಾಟ ಪರೀಕ್ಷೆಯು ಬೆಂಗಳೂರಿನ ಗ್ಯಾಸ್ ಟರ್ಬೈನ್ ರಿಸರ್ಚ್ ಎಸ್ಟಾಬ್ಲಿಷ್ಮೆಂಟ್ (ಜಿಟಿಆರ್ಇ) ಅಭಿವೃದ್ಧಿಪಡಿಸಿದ ಸ್ಥಳೀಯ ಪ್ರೊಪಲ್ಷನ್ ವ್ಯವಸ್ಥೆಯ ವಿಶ್ವಾಸಾರ್ಹ ಕಾರ್ಯಕ್ಷಮತೆಯನ್ನು ಸ್ಥಾಪಿಸಿದೆ ಎನ್ನಲಾಗಿದೆ.
ಪರೀಕ್ಷೆಯ ಸಮಯದಲ್ಲಿ, ಆಯುಧದ ಎಲ್ಲಾ ಉಪವ್ಯವಸ್ಥೆಗಳು ನಿರೀಕ್ಷೆಯಂತೆ ಕಾರ್ಯನಿರ್ವಹಿಸಿದವು. ಕ್ಷಿಪಣಿಯ ಕಾರ್ಯಕ್ಷಮತೆಯನ್ನು ರಾಡಾರ್, ಎಲೆಕ್ಟ್ರೋ ಆಪ್ಟಿಕಲ್ ಟ್ರ್ಯಾಕಿಂಗ್ ಸಿಸ್ಟಮ್ (ಇಒಟಿಎಸ್) ಮತ್ತು ಐಟಿಆರ್ ವಿವಿಧ ಸ್ಥಳಗಳಲ್ಲಿ ನಿಯೋಜಿಸಿದ ಟೆಲಿಮೆಟ್ರಿಯಂತಹ ಹಲವಾರು ಶ್ರೇಣಿ ಸಂವೇದಕಗಳಿಂದ ಮೇಲ್ವಿಚಾರಣೆ ಮಾಡಲಾಯಿತು ಎನ್ನಲಾಗಿದೆ.
THIS IS BIG! India tests Nirbhay cruise missile — for the first time with an Indian propulsion system, the Manik turbofan engine, replacing the earlier Russian engine. Hard to overstate what a milestone this is for India’s missile program. 👏🏽👏🏽👏🏽 pic.twitter.com/0wr6NGNdvU
— Shiv Aroor (@ShivAroor) April 18, 2024