ಬೆಂಗಳೂರು : ರಾಜ್ಯದಲ್ಲಿ ಎನ್ ಐಎ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಜೈಲಿನಲ್ಲಿರುವ ಶಂಕಿತ ಉಗ್ರರೊಂದಿಗೆ ನಿರಂತರ ಸಂಪರ್ಕ ಮತ್ತು ನೆರವು ನೀಡಿದ ಆರೋಪದಡಿ ಮೂವರನ್ನು ಬಂಧಿಸಿದೆ.
ಹಲವು ಜನರನ್ನು ಉಗ್ರ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದ ನಾಸೀರ್, ಜೈಲಿನಲ್ಲಿದ್ದುಕೊಂಡೇ ಉಗ್ರ ಚಟುವಟಿಕೆಗಳ ಬಗ್ಗೆ ಪ್ಲ್ಯಾನ್ ಮಾಡುತ್ತಿದ್ದ ಎನ್ನುವ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
ಜೈಲಿನಿಂದಲೇ ಯುವಕರ ತಂಡ ತಯಾರು ಮಾಡುತ್ತಿದ್ದ. ದಕ್ಷಿಣ ಭಾರತದಲ್ಲಿ ನಡೆದ ಹಲವು ಸ್ಪೋಟಗಳ ಮಾಸ್ಟರ್ ಮೈಂಡ್, 2008ರ ಸರಣಿ ಬಾಂಬ್, ಮಂಗಳೂರಿನಲ್ಲಿ ಕುಕ್ಕರ್ ಬಾಂಬ್, ಶಿವಮೊಗ್ಗದಲ್ಲಿ ಉಗ್ರ ಚಟುವಟಿಕೆ, ರಾಮೇಶ್ವರಂ ಕೆಫೆ ಬ್ಲ್ಯಾಸ್ಟ್ ಸೇರಿ ಹಲವು ಕೇಸ್ ಗಳಲ್ಲಿ ಭಯೋತ್ಪಾದಕ ಕೈವಾಡ ಇದ್ದು, ಸ್ಲೀಪರ್ ಸೆಲ್ ಗೆ ನೇರ ಸಂಪರ್ಕ ಹೊಂದಿದ್ದಾನೆ ಎಂದು ತಿಳಿದುಬಂದಿದೆ.
ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಕ್ಕೆ ಪ್ಲ್ಯಾನ್ ಮಾಡಿದ್ದ.ಹಾಗಾಗಿ ಜೈಲಿನಲ್ಲೇ ಇದ್ದುಕೊಂಡೇ ಯುವಕರ ತಂಡ ಕಟ್ಟಿದ್ದ. ಕೊಲೆ ಕೇಸ್ ನಲ್ಲಿ ಭಾಗಿಯಾದ ಯುವಕರ ಮೈಂಡ್ ವಾಶ್ ಮಾಡಿದ್ದ. ಜುಲೈದ್, ಮೊಹಮ್ಮದ್ ಹರ್ಷದ್ ಖಾನ್, ಸುಹೈಲ್, ಫೈಜಲ್, ಜಾಹಿದ್ ತಬ್ರೇಜ್, ಮುದಾಸಿರ್ ಒಳಗೊಂಡ ತಂಡ ರಚಿಸಿದ್ದ. ಬೆಂಗಳೂರಿನ ಆರ್.ಟಿ.ನಗರ, ಹೆಬ್ಬಾಳದಲ್ಲಿ ಗ್ರೆನೇಡ್, ಪಿಸ್ತೂಲ್, ಸ್ಪೋಟಕ ವಸ್ತುಗಳ ಸಮೇತ ತಂಡದ ಸದಸ್ಯರು ಸಿಕ್ಕಿಬಿದ್ದಿದ್ದಾರೆ.
NIA Arrests 3 Key Accused following Searches in Karnataka in LeT Prison Radicalisation Case pic.twitter.com/IHLuF501o4
— NIA India (@NIA_India) July 8, 2025