ಹನೋಯ್ : ವಿಯೆಟ್ನಾಂನ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ದೇಶದ ಅತ್ಯಂತ ಶಕ್ತಿಶಾಲಿ ರಾಜಕಾರಣಿ ನ್ಗುಯೆನ್ ಫು ಟ್ರೊಂಗ್ ಅವರು ಅನಾರೋಗ್ಯದ ಕಾರಣದಿಂದ ತಮ್ಮ 80 ನೇ ವಯಸ್ಸಿನಲ್ಲಿ ನಿಧನರಾದರು ಎಂದು ದೇಶದ ಅಧಿಕೃತ ಮಾಧ್ಯಮ ತಿಳಿಸಿದೆ. ಟ್ರಾಂಗ್ ಅವರು 2011ರಲ್ಲಿ ಪಕ್ಷದ ಮುಖ್ಯಸ್ಥರಾಗಿ ಆಯ್ಕೆಯಾದಾಗಿನಿಂದ ವಿಯೆಟ್ನಾಂ ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಿದ್ದರು.
ಅವರ ಅಧಿಕಾರಾವಧಿಯಲ್ಲಿ, ವಿಯೆಟ್ನಾಂನ ಏಕ-ಪಕ್ಷದ ರಾಜಕೀಯ ವ್ಯವಸ್ಥೆಯಲ್ಲಿ ಕಮ್ಯುನಿಸ್ಟ್ ಪಕ್ಷದ ಅಧಿಕಾರವನ್ನ ಕ್ರೋಢೀಕರಿಸಲು ಕೆಲಸ ಮಾಡಿದರು. ವಿಯೆಟ್ನಾಂ ರಾಜಕೀಯದಲ್ಲಿ ಅವರು ಉನ್ನತ ಪಾತ್ರ ವಹಿಸುವ ದಶಕದಲ್ಲಿ, ಅಧಿಕಾರದ ಸಮತೋಲನವು ಆಗಿನ ಪ್ರಧಾನಿ ನ್ಗುಯೆನ್ ಟಾನ್ ಡುಂಗ್ ನೇತೃತ್ವದ ಸರ್ಕಾರಿ ವಿಭಾಗದ ಕಡೆಗೆ ಹೆಚ್ಚು ಸ್ಥಳಾಂತರಗೊಂಡಿತ್ತು.
ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಬಗ್ಗೆ ಟೀಕೆ: ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಯ್ತು #BoycottPhonePe
ವಾಲ್ಮೀಕಿ ನಿಗಮದ ಹಗರಣ: ಹಣ ಎಟಿಎಂ ಮೂಲಕ ಕಾಂಗ್ರೆಸ್ ನಾಯಕರಿಗೆ ಹೋಗಿದೆಯೇ?: ಆರ್ ಅಶೋಕ್ ಪ್ರಶ್ನೆ