ಶ್ರೀನಗರ : ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಆರ್ಟಿಕಲ್ 370 ಮತ್ತು 35A ಅನ್ನು ಮರುಸ್ಥಾಪಿಸಲು ಜಮ್ಮುಕಾಶ್ಮೀರ ವಿಧಾನಸಭೆಯಲ್ಲಿ PDP ಹೊಸ ನಿರ್ಣಯವನ್ನು ಮಂಡಿಸಿದೆ.
370ನೇ ವಿಧಿಯನ್ನು ಮರು ಜಾರಿಗೆ ಅಂಗೀಕಾರದ ಬೆನ್ನಲ್ಲೇ ವಿಧಾನಸಭೆಯಲ್ಲಿ ಬಿಜೆಪಿ-ಪಿಡಿಪಿ ಸದಸ್ಯರ ನಡುವೆ ಭಾರೀ ಗದ್ದಲವಾಗಿದ್ದು, ಕೈ ಕೈ ಮಿಲಾಯಿಸಿದ್ದಾರೆ. ನಿರ್ಣಯದ ಪ್ರತಿ ಹರಿದು ಹಾಕಿ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
PDP moves a fresh resolution in J&K Assembly seeking restoration of Articles 370 and 35A. pic.twitter.com/zTRSRE4mCG
— ANI (@ANI) November 7, 2024
ಲಾಪ ಆರಂಭವಾಗುತ್ತಿದ್ದಂತೆ ಗೊತ್ತುವಳಿ ಮಂಡಿಸಿದ ಉಪಮುಖ್ಯಮಂತ್ರಿ ಸುರಿಂದರ್ ಚೌದರಿ ಅವರು, ವಿಶೇಷ ಸ್ಥಾನಮಾನದ ಮಹತ್ವ ಮತ್ತು ರಾಜ್ಯದ ಜನರ ಹೆಗ್ಗುರುತು, ಸಂಸ್ಕೃತಿ ಹಾಗೂ ಹಕ್ಕುಗಳನ್ನು ರಕ್ಷಿಸುವ ಸಾಂವಿಧಾನಿಕ ಗ್ಯಾರಂಟಿಯನ್ನು ಈ ವಿಧಾನಸಭೆ ದೃಢೀಕರಿಸುತ್ತದೆ. ಇಂತಹ ವಿಶೇಷ ಸ್ಥಾನಮಾನವನ್ನು ಏಕಪಕ್ಷೀಯವಾಗಿ ರದ್ದುಗೊಳಿಸಿದ ಕ್ರಮದ ಕುರಿತು ಕಳವಳ ವ್ಯಕ್ತಪಡಿಸುತ್ತದೆ ಎಂದು ಹೇಳಿದ್ದಾರೆ.
#WATCH | Srinagar: Ruckus and heated exchange of words ensued at J&K Assembly after Engineer Rashid's brother & Awami Ittehad Party MLA Khurshid Ahmad Sheikh displayed a banner on the restoration of Article 370. BJP MLAs objected to the banner display.
(Earlier visuals) pic.twitter.com/VQ9nD7pHTy
— ANI (@ANI) November 7, 2024