ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಏಷ್ಯಾಕಪ್‌ʼಗೆ ಬಿಸಿಸಿಐ ಭಾರತ ತಂಡವನ್ನ ಪ್ರಕಟಿಸಿದ್ದು, ರೋಹಿತ್‌ ಶರ್ಮಾಗೆ ನಾಯಕತ್ವದ ಜವಾಬ್ದಾರಿ ನೀಡಿದೆ. ಇನ್ನು ವಿರಾಟ್‌ ಕೊಹ್ಲಿ ಮತ್ತು ಕೆ.ಎಲ್‌ ರಾಹುಲ್‌ ತಂಡಕ್ಕೆ ಮರಳಿದ್ದಾರೆ.

ಹೌದು, ಬಿಸಿಸಿಐ ಸೋಮವಾರ ಏಷ್ಯಾ ಕಪ್ 2022ಕ್ಕೆ ಸ್ಟಾರ್-ಸ್ಟಡ್ಡ್ ಭಾರತ ತಂಡವನ್ನು ಆಗಸ್ಟ್ 27ರಂದು ಪ್ರಕಟಿಸಿದೆ. ವೆಸ್ಟ್ ಇಂಡೀಸ್ ಪ್ರವಾಸದಿಂದ ವಿಶ್ರಾಂತಿ ಪಡೆದಿದ್ದು, ಜಿಂಬಾಬ್ವೆ ಏಕದಿನ ಪಂದ್ಯದಿಂದ ಹೊರಗುಳಿಯಲಿರುವ ಕೊಹ್ಲಿ, ಆಗಸ್ಟ್ 28 ರಂದು ಪಾಕಿಸ್ತಾನದ ವಿರುದ್ಧ ನಡೆಯಲಿರುವ ಭಾರತದ ಆರಂಭಿಕ ಪಂದ್ಯವನ್ನ ನೇರವಾಗಿ ಆಡುವ ನಿರೀಕ್ಷೆಯಿದೆ. ಆದ್ರೆ, ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಬೆನ್ನು ನೋವಿನಿಂದಾಗಿ ಹೊರಗುಳಿದಿದ್ದಾರೆ.

ಆಗಸ್ಟ್ 28 ರಂದು ದುಬೈನಲ್ಲಿ ನಡೆಯಲಿರುವ ‘ಎ’ ಗುಂಪಿನ ಪಂದ್ಯದಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿವೆ. ಪಂದ್ಯಾವಳಿಯು ಆಗಸ್ಟ್ 27ರಂದು ಪ್ರಾರಂಭವಾಗಲಿದೆ ಮತ್ತು ಫೈನಲ್ ಸೆಪ್ಟೆಂಬರ್ 11ರಂದು ನಡೆಯಲಿದೆ. ಅಂದ್ಹಾಗೆ, ಈ ಮೊದಲು ಏಷ್ಯಾಕಪ್ʼನ್ನ ಯುಎಇಯಲ್ಲಿ ಶ್ರೀಲಂಕಾ ಆತಿಥ್ಯ ವಹಿಸಲಿದೆ ಎಂದು ಖಚಿತಪಡಿಸಲಾಗಿತ್ತು. ಪ್ರಸ್ತುತ ಆರ್ಥಿಕ ಬಿಕ್ಕಟ್ಟಿನಿಂದಾಗಿ ಪಂದ್ಯಾವಳಿಯನ್ನ ಶ್ರೀಲಂಕಾದಿಂದ ಸ್ಥಳಾಂತರಿಸಲಾಯಿತು.

ಏಷ್ಯಾಕಪ್ 2022ಕ್ಕೆ ಭಾರತ ತಂಡ ಇಂತಿದೆ..!
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್, ರಿಷಭ್ ಪಂತ್, ದೀಪಕ್ ಚಹರ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿ ಅಶ್ವಿನ್, ಯಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷ್ದೀಪ್ ಸಿಂಗ್, ಅವೇಶ್ ಖಾನ್

ಬ್ಯಾಕ್ ಅಪ್: ಶ್ರೇಯಸ್ ಅಯ್ಯರ್, ದೀಪಕ್ ಚಹರ್, ಅಕ್ಷರ್ ಪಟೇಲ್.

Share.
Exit mobile version