ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ ಟಿಟಿ 20 ವಿಶ್ವಕಪ್‌ ಫೈನಲ್‌ ಭರ್ಜರಿ ಗೆಲುವು ಸಾಧಿಸಿದ ಟೀಂ ಇಂಡಿಯಾಗೆ ದೇಶಾದ್ಯಂತ ಶುಭಾಶಯಗಳ ಸುರಿಮಳೆ ಹರಿದುಬರುತ್ತಿವೆ. ಈ ನಡುವೆ ಉತ್ತರ ಪ್ರದೇಶದ ಪೊಲೀಸರು ಟೀಂ ಇಂಡಿಯಾಗೆ ವಿಶಿಷ್ಟ ರೀತಿಯಲ್ಲಿ ಶುಭ ಕೋರಿದ್ದಾರೆ.

ಟೀಂ ಇಂಡಿಯಾ ವಿಶ್ವಕಪ್‌ ಗೆದ್ದ ಬಳಿಕ ಟ್ವೀಟ್‌ ಮಾಡಿರುವ ಉತ್ತರ ಪ್ರದೇಶದ ಪೊಲೀಸರು, ದಕ್ಷಿಣ ಆಫ್ರಿಕಾದ ಹೃದಯಗಳನ್ನು ಮುರಿದ ಭಾರತೀಯ ಬೌಲರ್ಗಳು ತಪ್ಪಿತಸ್ಥರು ಎಂದು ಕಂಡುಬಂದ ನಂತರ ಅವರ ವಿರುದ್ಧ “ಶಿಕ್ಷೆ” ಘೋಷಿಸಲಾಗಿದೆ. ಶಿಕ್ಷೆಯು “ಶತಕೋಟಿ ಅಭಿಮಾನಿಗಳಿಂದ ಆಜೀವ ಪ್ರೀತಿ”. ಎಂದು ಎಕ್ಸ್ ನಲ್ಲಿ ಪೋಸ್ಟ್‌ ಮಾಡಿದ್ದು, ಸದ್ಯ ಈ ಪೋಸ್ಟ್‌ ಭಾರೀ ವೈರಲ್‌ ಆಗಿದೆ.

ಎಕ್ಸ್‌ ನಲ್ಲಿ ಯುಪಿ ಪೊಲೀಸ್‌, “ಬ್ರೇಕಿಂಗ್ ನ್ಯೂಸ್: ದಕ್ಷಿಣ ಆಫ್ರಿಕಾದ ಹೃದಯವನ್ನು ಮುರಿದ ಭಾರತೀಯ ಬೌಲರ್ಗಳು ತಪ್ಪಿತಸ್ಥರು ಎಂದು ಸಾಬೀತಾಗಿದೆ. ಶಿಕ್ಷೆ: ಶತಕೋಟಿ ಅಭಿಮಾನಿಗಳಿಂದ ಜೀವಮಾನದ ಪ್ರೀತಿ!” ಎಂದು ಪೋಸ್ಟ್‌ ಮಾಡಿದೆ.

ಭಾರತವು ಟಿ 20 ವಿಶ್ವಕಪ್ ಗೆದ್ದಾಗ ದೇಶಾದ್ಯಂತ ತಡರಾತ್ರಿ ಸಂಭ್ರಮಾಚರಣೆಗಳು ಮುಗಿಲು ಮುಟ್ಟಿದ್ದವು, ಅಭಿಮಾನಿಗಳು ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ಬೀದಿಗಳಲ್ಲಿ ನೆರೆದಿದ್ದರು. ‘ಟೀಂ ಇಂಡಿಯಾ’ ಹುರಿದುಂಬಿಸಲು ದೇಶದ ವಿವಿಧ ಭಾಗಗಳಲ್ಲಿ ಜನಸಮೂಹ ಜಮಾಯಿಸುತ್ತಿದ್ದಂತೆ ‘ಇಂಡಿಯಾ, ಇಂಡಿಯಾ’ ಎಂಬ ಘೋಷಣೆಗಳು ಪ್ರತಿಧ್ವನಿಸಿದವು. ಜಮ್ಮು, ಹೈದರಾಬಾದ್, ಬೆಂಗಳೂರು, ಪಾಟ್ನಾ. ಪುಣೆ ಸೇರಿದಂತೆ ದೇಶಾದ್ಯಂತ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

Share.
Exit mobile version