ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ಬ್ಯಾರಿ ಸಿಂಕ್ಲೇರ್ (85) ನಿಧನರಾಗಿದ್ದಾರೆ. ಮೂರು ಟೆಸ್ಟ್ ಪಂದ್ಯಗಳಲ್ಲಿ ನ್ಯೂಜಿಲೆಂಡ್ ತಂಡವನ್ನ ಮುನ್ನಡೆಸಿದ ಸಿಂಕ್ಲೇರ್, ಬರ್ಟ್ ಸಟ್ಕ್ಲಿಫ್ ಮತ್ತು ಜಾನ್ ಆರ್ ರೀಡ್ ನಂತ್ರ 1000 ರನ್ ಗಳಿಸಿದ ದೇಶದ ಮೂರನೇ ಆಟಗಾರರಾಗಿದ್ದಾರೆ. ಸಿಂಕ್ಲೇರ್ 1963 ಮತ್ತು 1968ರ ನಡುವೆ 21 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ, 1148 ರನ್ ಗಳಿಸಿದ್ದಾರೆ.

ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಮತ್ತು ಇಂಗ್ಲೆಂಡ್ ವಿರುದ್ಧ ತಲಾ ಮೂರು ಶತಕಗಳನ್ನ ಬಾರಿಸಿದರು. ಸಿಂಕ್ಲೇರ್ ಒಟ್ಟು 118 ಪ್ರಥಮ ದರ್ಜೆ ಪಂದ್ಯಗಳನ್ನ ಆಡಿದ್ದು, ಆರು ಶತಕಗಳು ಮತ್ತು 38 ಅರ್ಧಶತಕಗಳೊಂದಿಗೆ 6114 ರನ್ ಗಳಿಸಿದ್ದಾರೆ. ಸಿಂಕ್ಲೇರ್ 2008-09 ರಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ಆಟಗಾರರ ಸಂಘದೊಂದಿಗೆ ತೊಡಗಿಸಿಕೊಂಡಿದ್ದರು, ಇನ್ನವ್ರು ಉದ್ಘಾಟನಾ ಪೋಷಕರಾಗಿದ್ದರು.

Share.
Exit mobile version