ನವದೆಹಲಿ : ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾಗೆ ಸುಪ್ರೀಂ ಕೋರ್ಟ್ ನಿಂದ ಇಂದು ಬಿಗ್ ರಿಲೀಫ್ ಸಿಕ್ಕಿದೆ. ಅವರ ವಿರುದ್ಧ ವಿವಿಧ ರಾಜ್ಯಗಳಲ್ಲಿ ದಾಖಲಾದ ಪ್ರಕರಣವನ್ನ ಸುಪ್ರೀಂ ಕೋರ್ಟ್ ದೆಹಲಿಗೆ ವರ್ಗಾಯಿಸಿದೆ. ಇದಕ್ಕೂ ಮೊದಲು ಜುಲೈ 19ರಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆಮ್ಷೆಡ್ ಪರ್ಡಿವಾಲಾ ಅವರ ಪೀಠವು ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಹೇಳಿಕೆ ನೀಡಿದ ಪ್ರಕರಣದಲ್ಲಿ ನೂಪುರ್ ಅವರ ಬಂಧನಕ್ಕೆ ತಡೆ ನೀಡಿತ್ತು. ಅಲ್ಲದೆ, 8 ರಾಜ್ಯಗಳಲ್ಲಿ ದಾಖಲಾದ ಎಫ್ಐಆರ್‌ಗಳನ್ನ ದೆಹಲಿಗೆ ವರ್ಗಾಯಿಸಲು ನೋಟಿಸ್ ನೀಡಲಾಗಿದೆ.

ವಿಚಾರಣೆಯ ಸಮಯದಲ್ಲಿ, ನೂಪುರ್ ಅವರ ವಕೀಲ ಮಣಿಂದರ್ ಸಿಂಗ್, ಅನೇಕ ಪಕ್ಷಗಳಿಂದ ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲ. ಪಶ್ಚಿಮ ಬಂಗಾಳದಿಂದ ನಮಗೆ ಪದೇ ಪದೇ ಸಮನ್ಸ್ ಬರುತ್ತಿದೆ ಎಂದು ಹೇಳಿದರು. ಈ ಬಗ್ಗೆ, ನ್ಯಾಯಮೂರ್ತಿ ಸೂರ್ಯ ಕಾಂತ್, ಆದ್ರೆ, ನಾವು ದಂಡನಾತ್ಮಕ ಕ್ರಮವನ್ನು ತಡೆಹಿಡಿದಿದ್ದೇವೆ ಎಂದು ಹೇಳಿದರು. ಇದರ ನಂತ್ರ ಮಣಿಂದರ್ ಸಿಂಗ್ ಎಲ್ಲಾ ಪ್ರಕರಣಗಳನ್ನ ದೆಹಲಿಗೆ ವರ್ಗಾಯಿಸುವುದು ಉತ್ತಮ ಎಂದು ಹೇಳಿದರು.

ಇದಾದ ನಂತರ, ನ್ಯಾಯಾಧೀಶರು ಜುಲೈ 19ರಂದು ನಮ್ಮ ವಿಚಾರಣೆಯ ನಂತರ ಬೇರೆ ಯಾವುದೇ ಎಫ್ಐಆರ್ ಇದೆಯೇ ಎಂದು ಕೇಳಿದರು. ನಾವು ಎಲ್ಲಾ ಎಫ್ಐಆರ್‌ಳನ್ನು ಒಟ್ಟಿಗೆ ಜೋಡಿಸುತ್ತೇವೆ ಮತ್ತು ಅವುಗಳನ್ನ ದೆಹಲಿಗೆ ವರ್ಗಾಯಿಸುತ್ತೇವೆ ಎಂದು ಹೇಳಿದರು. ಎಫ್ಐಆರ್ ರದ್ದುಗೊಳಿಸಲು ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿಗೆ ಅವಕಾಶ ನೀಡಬೇಕು ಎಂದು ಮಣಿಂದರ್ ಹೇಳಿದರು. ಇದರ ಬಗ್ಗೆ, ನ್ಯಾಯಾಧೀಶರು ಹೌದು, ಅದನ್ನು ಮಾಡಲಾಗುವುದು ಎಂದರು.

ಪಶ್ಚಿಮ ಬಂಗಾಳದ ವಕೀಲರು ಹೇಳಿದ್ದೇನು?
ಇದಾದ ಬಳಿಕ ಪಶ್ಚಿಮ ಬಂಗಾಳದ ವಕೀಲೆ ಮೇನಕಾ ಗುರುಸ್ವಾಮಿ, ದೆಹಲಿಯಲ್ಲಿ ದಾಖಲಾಗಿರುವ ಮೊದಲ ಎಫ್‌ಐಆರ್‌ನಲ್ಲಿ ನೂಪುರ್ ದೂರುದಾರರೇ ಹೊರತು ಆರೋಪಿಯಲ್ಲ. ಹಾಗಾದರೆ ನೂಪುರ್ ಆರೋಪಿಯಾಗಿರುವ ಮೊದಲ ಎಫ್‌ಐಆರ್ ಯಾವುದು? ಎಫ್‌ಐಆರ್ ಮುಂಬೈನಿಂದ ಬಂದಿದೆ ಎಂದು ಮೇನಕಾ ಹೇಳಿದ್ದಾರೆ.

ಈ ಬಗ್ಗೆ ಮಣಿಂದರ್ ಸಿಂಗ್ ಅವರು ನೂಪುರ್ ಜೀವಕ್ಕೆ ಅಪಾಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ದೆಹಲಿಗೆ ಮಾತ್ರ ವರ್ಗಾವಣೆ ಮಾಡುತ್ತೇವೆ ಎಂದು ನ್ಯಾಯಪೀಠ ಹೇಳಿದೆ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮೇನಕಾ, ಇದು ತಪ್ಪಾಗುತ್ತದೆ. ಮೊದಲ ಎಫ್‌ಐಆರ್ ಮುಂಬೈನಿಂದ ಬಂದಿದೆ ಎಂದರು. ಆಗ ಈ ಬಗ್ಗೆ, ತನಿಖಾ ಸಂಸ್ಥೆ (ದೆಹಲಿ ಪೊಲೀಸರು) ತನ್ನ ಕೆಲಸವನ್ನ ಮಾಡುತ್ತದೆ ಎಂದು ನ್ಯಾಯಮೂರ್ತಿ ಹೇಳಿದರು.

ಮೇನಕಾ ಮಧ್ಯಪ್ರವೇಶಿಸಿ, ಈ ಹಿಂದೆ ಎಲ್ಲಾ ಎಫ್‌ಐಆರ್‌ಗಳನ್ನು ದೆಹಲಿಗೆ ವರ್ಗಾಯಿಸುವ ಬೇಡಿಕೆಯನ್ನು ಒಮ್ಮೆ ತಿರಸ್ಕರಿಸಲಾಗಿದೆ. ಹಾಗಾಗಿ ಜಂಟಿ ಎಸ್‌ಐಟಿ ರಚಿಸುವುದು ಉತ್ತಮ ಎಂದರು. ಈ ಕುರಿತು ನ್ಯಾಯಮೂರ್ತಿಗಳು, ಭದ್ರತಾ ಕಾರಣಗಳಿಂದಾಗಿ ಅರ್ಜಿದಾರರು ದೇಶಾದ್ಯಂತ ನ್ಯಾಯಾಲಯಗಳಿಗೆ ಹೋಗಲು ಸಾಧ್ಯವಿಲ್ಲ ಎಂದು ನಾವು ನಂತ್ರ ಕಂಡುಕೊಂಡಿದ್ದೇವೆ ಎಂದು ಹೇಳಿದರು.

ನ್ಯಾಯಾಲಯದ ಆದೇಶ..!
ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಆದೇಶದಲ್ಲಿ, “ಅರ್ಜಿದಾರರು ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಅಥವಾ ದೆಹಲಿಗೆ ವರ್ಗಾಯಿಸಲು ಕೋರಿದ್ದಾರೆ, ಆದ್ದರಿಂದ ಅದೇ ಸಂಸ್ಥೆ ತನಿಖೆ ನಡೆಸಬಹುದು. ಜುಲೈ 1ರಂದು ನಾವು ಬೇಡಿಕೆಯನ್ನು ತಿರಸ್ಕರಿಸಿದ್ದೇವೆ. ಆದರೆ ನಂತರ ನಮಗೆ ಹೊಸ ಸಂಗತಿಗಳು ಬಂದವು. “

ಎಫ್‌ಐಆರ್ ರದ್ದುಪಡಿಸುವ ಬೇಡಿಕೆಯ ಕುರಿತು ನಾವು ಯಾವುದೇ ಆದೇಶವನ್ನ ನೀಡುತ್ತಿಲ್ಲ ಎಂದು ನ್ಯಾಯಮೂರ್ತಿ ಹೇಳಿದರು. ಇದಕ್ಕಾಗಿ ಅರ್ಜಿದಾರರು ದೆಹಲಿ ಹೈಕೋರ್ಟ್‌ನಲ್ಲಿ ಬೇಡಿಕೆ ಸಲ್ಲಿಸಬಹುದು. ಅರ್ಜಿದಾರರ ಜೀವಕ್ಕೆ ಗಂಭೀರ ಅಪಾಯವನ್ನ ನಾವು ಪರಿಗಣಿಸಿದ್ದೇವೆ. ನಾವು ಎಲ್ಲ ಎಫ್‌ಐಆರ್‌ಗಳು ದೆಹಲಿಗೆ ವರ್ಗಾಯಿಸುತ್ತಿದ್ದೇವೆ ದೆಹಲಿ ಪೊಲೀಸರು ತನಿಖೆ ನಡೆಸುತ್ತಾರೆ” ಎಂದರು.

Share.
Exit mobile version