ಗದಗ: ಯೋಗ್ಯತೆ ಇದ್ದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ, ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡಲಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಗಜೇಂದ್ರಘಡದಲ್ಲಿ ಇಂದು ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಯವರ ಪರ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ಮೋದಿಯವರು ಕಳೆದ ಹತ್ತು ವರ್ಷದಲ್ಲಿ ಒಂದು ದಿನವೂ ರಜೆ ತೆಗೆದುಕೊಳ್ಳದೇ ಕೆಲಸ ಮಾಡಿದ್ದಾರೆ. ತಮ್ಮ ತಾಯಿ ತಿರಿಕೊಂಡಾಗ ಅಂತ್ಯ ಸಂಸ್ಕಾರ ಮಾಡಿ ಮತ್ತೆ ಕರ್ತವ್ಯಕ್ಕೆ ಹಾಜರಿಯಾಗಿದ್ದರು.

ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದದರ್ಭದಲ್ಲಿ ಕಾಂಗ್ರೆಸ್ ನ್ನು ವಿಸರ್ಜಿಸುವಂತೆ ಮಹಾತ್ಮಾ ಗಾಂಧಿಜಿ ಸೂಚಿಸಿದ್ಸರು. ಆಗ ಕಾಂಗ್ರೆಸ್ ವಿಸರ್ಜಿಸಲಿಲ್ಲ. ಈಗ ಜನರು ಮಹಾತ್ಮಾ ಗಾಂಧಿ ಯವರ ಆದೇಶ ಪಾಲನೆ ಮಾಡಿ ಕಾಂಗ್ರೆಸ್ ನ್ನು ನಿರ್ಮೂಲನೆ ಮಾಡುತ್ತಿದ್ದಾರೆ ಎಂದರು.

ರಾಜ್ಯದಲಿ ನರೇಂದ್ರ ಮೋದಿಯವರ ಆಶೀರ್ವಾದಿಂದ 28 ಕ್ಕೆ 28 ಸ್ಥಾನ ಗೆಲ್ಲುತ್ತೇವೆ. ನಾನು ರೈತರಿಗೆ ನಾಲ್ಕು ಸಾವಿರ ಕೊಡುವುದನ್ನು ಯಾಕೆ ನ್ಲಿಲ್ಲಿಸಿದಿರಿ. ಭಾಗ್ಯಲಕ್ಷ್ಮೀ ಯಾಕೆ ನಿಲ್ಲಿಸಿದಿರಿ, ಸರ್ಕಾರ ದಿವಾಳಿಯಾಗಿದೆ. ಈ ಚುನಾವಣೆ ನಂತರ ಕಾಂಗ್ರೆಸ್ ಧೂಳಿಪಟವಾಗುತ್ತದೆ. ಗಜೇಂದ್ರಘಡಕ್ಕೆ ಅನೇಕ ಸಾರಿ ಬಂದಿದ್ದೇನೆ. ಈ ಬಾರಿ ತೋರಿಸುತ್ತಿರುವ ಉತ್ಸಾಹ ಎಂದೂ ನೋಡಿರಲಿಲ್ಲ. ಮನೆ ಮನೆಗೆ ಹೋಗಿ ಎಲ್ಲರನ್ನು ಮತದಾನ ಕೇಂದ್ರಕ್ಕೆ ಕರೆದುಕೊಂಡು ಬಂದು ಮೋದಿಯವರಿಗೆ ಮತ ಹಾಕುವಂತೆ ಮಾಡಿ ಎಂದರು.

ಎರಡು ಲಕ್ಷ ಅಂತರದಿಂದ ಗೆಲ್ಲಿಸಿ

ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ, ಹಣಕಾಸು ಸಚಿವರಾಗಿ ಅನುಭವ ಹೊಂದಿದ್ದಾರೆ. ಅವರ ಅನುಭವ ಸಂಸತ್ತಿನಲ್ಲಿ ಬಳಕೆ ಮಾಡಿಕೊಳ್ಳಲು ಅವರನ್ನು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ, ಅವರಿಗೆ ಕೇಂದ್ರದಲ್ಲಿ ಒಳ್ಳೆಯ ಸ್ಥಾನಮಾನ ಸಿಗಬೇಕು. ಇದು ನಮ್ಮೆಲ್ಲರ ಅಪೇಕ್ಷೆಯಾಗಿದೆ ಎಂದು ಹೇಳಿದರು.

ಪಾಕಿಸ್ತಾನವೂ ಕೂಡ ಮೋದಿಯವರು ಮತ್ತೆ ಪ್ರಧಾನಿಯಾಗಬೇಕು ಎಂದು ಬಯಸುತ್ತಿದ್ದಾರೆ. ಜೆಡಿಎಸ್ ಬಿಜೆಪಿ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಿ, ನಮ್ಮ ಮೈತ್ರಿ ಚುನಾವಣೆಯ ನಂತರವೂ ಮುಂದುವರೆಯಲಿದೆ. ನಿಮ್ಮ ನಂಬಿಕೆ ವಿಶ್ವಾಸಕ್ಕೆ ದ್ರೊಹ ಮಾಡುವುದಿಲ್ಲ. ನಾನು ನ್ಯಾಯ ಕೊಡಿಸಲು ಹೋರಾಟ ಮಾಡಲು ಸಿದ್ದನಿದ್ದೇನೆ ಎಂದು ಹೇಳಿದರು.

ಮಂತ್ರಿಗಳೆ ನಿಮ್ಮ ಒಂದು ವರ್ಷದ ಸಾಧನೆ ಏನು?: ಬಸವರಾಜ ಬೊಮ್ಮಾಯಿ ಪ್ರಶ್ನೆ

Prajwal Revanna: ಪ್ರಜ್ವಲ್ ರೇವಣ್ಣ ವೀಡಿಯೋ ಬಿಡುಗಡೆಗೆ ಕ್ಷಣಗಣನೆ, 8AM: ಏ.8ರಂದೇ ‘ಫೇಸ್ ಬುಕ್’ನಲ್ಲಿ ‘ನವೀನ್ ಗೌಡ ಪೋಸ್ಟ್’

Share.
Exit mobile version