ಮಡಿಕೇರಿ: ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆತ ಪ್ರಕರಣಕ್ಕೆ ತಡರಾತ್ರಿ ನಿನ್ನೆ ತಡರಾತ್ರಿ ಬಿಜೆಪಿಯ 9 ಮಂದಿ ಬಂಧನ, ಬಿಡುಗಡೆ ಮಾಡಲಾಗಿದೆ. ಇದೇ ವೇಳೆ ಬಂಧಿತರ ಪರವಾಗಿ ಕೊಡಗು ಜಿಲ್ಲಾ ಶಾಸಕರುಗಳಾದ ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ ಠಾಣೆಗೆ ಆಗಮಿಸಿ ಬಿಡುಗಡೆಗೊಳಿಸುವಲ್ಲಿ ಮುಂದಾಳತ್ವ ವಹಿಸಿ ಠಾಣೆ ಮುಂದೆ ಧರಣಿಯನ್ನು ನಡೆಸಿದ ಬಳಿಕ ಪೋಲಿಸರು ಒತ್ತಡಕ್ಕೆ ಮಣಿದು ಆರೋಪಿಗಳನ್ನು ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ.

ಈ ನಡುವೆಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ವಿಚಾರವಾಗಿ ದೆಹಲಿಯಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಮಾತನಾಡಿ,  ವಿಪಕ್ಷ ನಾಯಕರಿಗೆ ಭದ್ರತೆ ನೀಡಲು ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲೆಲ್ಲಿ ಹೋಗ್ರಾರೆ ಅಲ್ಲಿ ಭದ್ರತೆ ನೀಡಲು ಹೇಳಿದ್ದೇವೆ ಕಾನೂನು ಸುವ್ಯವಸ್ಥೆ ಹದಗೆಡಿಲ್ಲ. ಮೊಟ್ಟೆ ಎಸೆದಿರುವುದನ್ನ ನಾನು ಸಮರ್ಥಿಸಿಕೊಳ್ಳುತ್ತಿಲ್ಲ. ಆದ್ರೆ ಸಿಎಂ ಆಗಿದ್ದ ವ್ಯಕ್ತಿ ಘನತೆಗೆ ತಕ್ಕ ಮಾತನಾಡಲಿ. ಹಾಗೇ ಮಾತನಾಡಿದ್ದರಿಂದ ಇಂಥ ಘಟನೆ  ನಡೆಯೋದು. ಅವರ ಮಾತುಗಲು ಅವರ ಹಿರಿತನಕ್ಕೆ ಶೋಭೆ ತರಲ್ಲ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.

Share.
Exit mobile version