ಬೆಂಗಳೂರು : ರಾಜ್ಯದ ಜನತೆಗೆ ಹೊಸ ವರ್ಷಕ್ಕೆ ಬಿಗ್ ಶಾಕ್ ಎದುರಾಗಿದ್ದು, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ವಿದ್ಯುತ್ ಬಿಲ್ ಪ್ರತಿ ಯೂನಿಟ್ ಗೆ 10 ಪೈಸೆವರೆಗೆ ಹೆಚ್ಚಿಸಲು ನಿರ್ಧರಿಸಿದೆ ಎನ್ನಲಾಗಿದೆ.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ರಾಜ್ಯದಲ್ಲಿ ಪ್ರತಿ ಯೂನಿಟ್ ಗೆ 10 ಪೈಸೆ ದರ ಹೆಚ್ಚಿಸಲು ನಿರ್ಧರಿಸಿದ್ದು, ಗ್ರಾಹಕರು ಬಳಸುವ ವಿದ್ಯುತ್ ಗೆ ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ ಎಂದು ಹೇಳಿದೆ. ಇದನ್ನು ಟಾಪ್ ಅಪ್ ಅಥವಾ ಟ್ರೂ ಅಪ್ ಎಂದು ಕರೆದಿದೆ. ಆದರೆ ವಿದ್ಯುತ್ ದರ ಪರಿಷ್ಕರಣೆ ಎಂದು ಹೇಳಿಲ್ಲ. ಈ ಮೂಲಕ ರಾಜ್ಯದ ಜನತೆಗೆ ಶಾಕ್ ನೀಡಿದೆ.
ಟಾಪ್ ಅಪ್ ಎಲ್ಲಾ ಎಸ್ಕಾಂಗಳಿಗೆ ಸಮಾನವಾಗಿ ಅನ್ವಯವಾಗಲಿದೆ. ಪ್ರತಿ ಯೂನಿಟ್ ಗೆ ಗರಿಷ್ಟ 8-10 ಪೈಸೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಗೃಹಜ್ಯೋತಿ ಯೋಜನೆಯ ನಿಯಮಗಳ ಅನ್ವಯ ಗ್ರಾಹಕರ ಬಿಲ್ನಲ್ಲಿ ಬದಲಾವಣೆಗಳಾಗುತ್ತಿವೆ, ಕೆಲವು ವರ್ಗದವರಿಗೆ ಹೊರೆ ಹೆಚ್ಚಾಗುವ ಸಾಧ್ಯತೆ ಇದೆ. ಹೊಸ ಮಾದರಿಯಲ್ಲಿ ಮೂರು ವರ್ಷಕ್ಕೊಮ್ಮೆ ಮಾತ್ರ ದರ ಪರಿಷ್ಕರಣೆ ನಡೆಯಲಿದೆ.








