ನವದೆಹಲಿ : ಹೊಸ ವರ್ಷದ ಮೊದಲ ದಿನವೇ ಕೇಂದ್ರ ಸರ್ಕಾರ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆ ಮತ್ತು ಪುನರ್ರಚಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನ 2025-26 ರವರೆಗೆ ಮುಂದುವರಿಸಲು ಅನುಮೋದನೆ ನೀಡಲಾಯಿತು, ಇದಕ್ಕಾಗಿ ಒಟ್ಟು 69515.71 ಕೋಟಿ ರೂಪಾಯಿ ಮೀಸಲಿರಿಸಿದೆ.
ರೈತರಿಗೆ 50 ಕೆಜಿ ಡಿಎಪಿ ಚೀಲವನ್ನ 1350 ರೂ.ಗೆ ನೀಡುವುದನ್ನು ಮುಂದುವರಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಡಿಎಪಿ ಮೇಲೆ 3850 ಕೋಟಿ ಹೆಚ್ಚುವರಿ ಅನುದಾನ ನೀಡಲು ಸರ್ಕಾರ ನಿರ್ಧರಿಸಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಲೆ ಏರಿಕೆಯಿಂದ ರೈತರಿಗೆ ತೊಂದರೆಯಾಗದಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ಡಿಎಪಿ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು 01 ಜನವರಿ 2025 ರಿಂದ 31 ಡಿಸೆಂಬರ್ 2025 ರವರೆಗೆ NBS ಸಬ್ಸಿಡಿಯನ್ನ ಮೀರಿ ಒಂದು ಬಾರಿಯ ವಿಶೇಷ ಪ್ಯಾಕೇಜ್ ಅನ್ನು ವಿಸ್ತರಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಬ್ರೀಫಿಂಗ್‌ನಲ್ಲಿ ತಿಳಿಸಿದ್ದಾರೆ , ಕ್ಯಾಬಿನೆಟ್ ನಿರ್ಧಾರವು ರೈತರಿಗೆ ಡಿಎಪಿ ರಸಗೊಬ್ಬರವನ್ನು 50 ಕೆಜಿ ಚೀಲಕ್ಕೆ 1,350 ರೂ.ಗೆ ಪಡೆಯುವುದನ್ನು ಖಚಿತಪಡಿಸುತ್ತದೆ.
2025ರ ಮೊದಲ ಸಚಿವ ಸಂಪುಟ ಸಭೆಯನ್ನು ಪ್ರಧಾನಿಯವರು ರೈತರಿಗೆ ಸಮರ್ಪಿಸಿದ್ದಾರೆ ಎಂದ ವೈಷ್ಣವ್, ಈ ಮೊದಲ ಸಭೆಯಲ್ಲಿ ರೈತರಿಗೆ ಸಂಬಂಧಿಸಿದ ಸಮಗ್ರ ಚರ್ಚೆ ನಡೆದಿದ್ದು, ವಿವಿಧ ಅಂಶಗಳನ್ನು ಒಳಗೊಂಡಿದ್ದು, ಇಂದು ಕೈಗೊಂಡ ನಿರ್ಧಾರಗಳು ಸಂಪೂರ್ಣವಾಗಿ ರೈತರ ಕಲ್ಯಾಣಕ್ಕೆ ಒತ್ತು ನೀಡಿವೆ.
BREAKING : ಟೆಕ್ಕಿ ಅತುಲ್ ಬಳಿಕ ಪತ್ನಿಯ ಕಿರುಕುಳಕ್ಕೆ ಮತ್ತೊಂದು ಬಲಿ : ದೆಹಲಿಯಲ್ಲಿ ಬೇಕರಿ ಮಾಲೀಕ ನೇಣಿಗೆ ಶರಣು!