ಕಠ್ಮಂಡು :ಮಂಗಳವಾರ ನೇಪಾಳದ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿದ್ದು, ಜನ್ ಝಡ್ ನೇತೃತ್ವದ ಪ್ರತಿಭಟನೆಗಳು ದೇಶಾದ್ಯಂತ ಹಿಂಸಾತ್ಮಕವಾಗಿ ನಡೆಯುತ್ತಿವೆ. ಸಧ್ಯ ನೇಪಾಳ ಪ್ರಧಾನಮಂತ್ರಿ ಕೆ.ಪಿ. ಶರ್ಮಾ ಓಲಿ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇದಕ್ಕೂ ಮುನ್ನ ಸೇನಾ ಮುಖ್ಯಸ್ಥ ಜನರಲ್ ಅಶೋಕ್ ರಾಜ್ ಸಿಗ್ಡೆಲ್ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರನ್ನು ರಾಜೀನಾಮೆ ನೀಡುವಂತೆ ಕೇಳಿಕೊಂಡರು ಎಂದು ಮೂಲಗಳು ತಿಳಿಸಿವೆ.
ವರದಿ ಪ್ರಕಾರ, ಓಲಿ ಸೇನಾ ಮುಖ್ಯಸ್ಥರೊಂದಿಗೆ ಮಾತನಾಡಿ, ಹದಗೆಡುತ್ತಿರುವ ಪರಿಸ್ಥಿತಿಯ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಒತ್ತಾಯಿಸಿದರು. ಓಲಿ ಅಧಿಕಾರವನ್ನು ತ್ಯಜಿಸಿದರೆ ಮಾತ್ರ ಸೇನೆಯು ದೇಶವನ್ನ ಸ್ಥಿರಗೊಳಿಸಲು ಸಾಧ್ಯ ಎಂದು ಜನರಲ್ ಸಿಗ್ಡೆಲ್ ಪ್ರತಿಕ್ರಿಯಿಸಿದರು. ಓಲಿ ಕೆಳಗಿಳಿದ ನಂತರ ಸೇನೆಯು ಮಧ್ಯಪ್ರವೇಶಿಸಲು ಸಿದ್ಧವಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ಪ್ರಧಾನಿಯವರು ಬಲುವತಾರ್’ನಲ್ಲಿರುವ ತಮ್ಮ ಅಧಿಕೃತ ನಿವಾಸದಿಂದ ಸುರಕ್ಷಿತ ಮಾರ್ಗವನ್ನ ಖಚಿತಪಡಿಸಿಕೊಳ್ಳಲು ಸೇನೆಯ ಸಹಾಯವನ್ನ ಕೋರಿದ್ದಾರೆ ಮತ್ತು ದೇಶವನ್ನ ತೊರೆಯಲು ಸಹಾಯವನ್ನ ಕೋರಿದ್ದಾರೆ. ಓಲಿ ವೈದ್ಯಕೀಯ ಚಿಕಿತ್ಸೆಯ ನೆಪದಲ್ಲಿ ದುಬೈಗೆ ಹಾರಲು ಯೋಜಿಸುತ್ತಿದ್ದಾರೆ, ಖಾಸಗಿ ವಿಮಾನಯಾನ ಸಂಸ್ಥೆ ಹಿಮಾಲಯ ಏರ್‌ಲೈನ್ಸ್ ಸನ್ನದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ.