ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ನಡೆದ ನೇಹಾ ಕೊಲೆ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದ್ದು, ಈ ನಡುವೆ ಮುಸ್ಲಿಮರು ನಾಳೆ ಅರ್ಧ ದಿನ ಧಾರವಾಡ ಬಂದ್ ಗೆ ಕರೆ ಕೊಟ್ಟಿವೆ.
ನೇಹಾ ಹತ್ಯೆ ಖಂಡಿಸಿ ನಾಳೆ ಅರ್ಧ ದಿನ ಧಾರವಾಡ ಬಂದ್ ಗೆ ಕರೆ ನೀಡಲಾಗಿದ್ದು, ಮುಸ್ಲಿಮರು ತಮ್ಮ ಅಂಗಡಿ, ಮುಂಗಟ್ಟು ಬಂದ್ ಮಾಡಿ ಬಂದ್ ಗೆ ಬೆಂಬಲ ನೀಡುವುದಾಗಿ ಅಂಜುಮನ್ ಘೋಷಿಸಿದೆ.
ಈ ನಡುವೆ ಎಂಸಿಎ ವಿದ್ಯಾರ್ಥಿನಿ ನೇಹಾ ನಿರಂಜನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಬಿಡನಾಳ ಬಡಾವಣೆಯಲ್ಲಿರುವ ನೇಹಾ ತಂದೆ ನಿರಂಜನ್ ಹಿರೇಮಠ ನಿವಾಸಕ್ಕೆ ಮುಸ್ಲಿಂ ಮುಖಂಡರು ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ.