ನವದೆಹಲಿ: ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಮಾಸ್ಟರ್ ಮೈಂಡ್ B.Tech ಪದವೀಧರ ಮತ್ತು ಇಬ್ಬರು ಎಂಬಿಬಿಎಸ್ ವಿದ್ಯಾರ್ಥಿಗಳನ್ನ ಸಿಬಿಐ ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ.
ವರದಿಯ ಪ್ರಕಾರ, ಪಾಟ್ನಾದ ಭರತ್ಪುರ ವೈದ್ಯಕೀಯ ಕಾಲೇಜಿನ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ ಮೂವರನ್ನ ಸಿಬಿಐ ಬಂಧಿಸಿದೆ. ಬಂಧಿತ ವೈದ್ಯಕೀಯ ವಿದ್ಯಾರ್ಥಿಗಳನ್ನ ಕುಮಾರ್ ಮಂಗಲಂ ಬಿಷ್ಣೋಯ್ ಮತ್ತು ದೀಪೇಂದರ್ ಕುಮಾರ್ ಎಂದು ಗುರುತಿಸಲಾಗಿದೆ. “ತಾಂತ್ರಿಕ ಕಣ್ಗಾವಲು ಪರೀಕ್ಷೆಯ ದಿನದಂದು ಹಜಾರಿಬಾಗ್ನಲ್ಲಿ ಅವರ ಉಪಸ್ಥಿತಿಯನ್ನ ದೃಢಪಡಿಸಿದೆ. ಬಂಧಿತ ಮತ್ತೊಬ್ಬ ಆರೋಪಿ ಶಶಿ ಕುಮಾರ್ ಪಾಸ್ವಾನ್ ಆಲ್ರೌಂಡರ್. ಕಿಂಗ್ ಪಿನ್’ಗೆ ಆತ ಎಲ್ಲ ರೀತಿಯ ಬೆಂಬಲ ನೀಡುತ್ತಿದ್ದ ಎಂದು ಸಿಬಿಐ ಮೂಲಗಳು ತಿಳಿಸಿವೆ.
BREAKING : ಕೇರಳದಲ್ಲಿ 14 ವರ್ಷದ ಬಾಲಕನಿಗೆ ‘ನಿಪಾಹ್ ಸೋಂಕು’ ಧೃಢ : ಆರೋಗ್ಯ ಸಚಿವೆ ‘ವೀಣಾ ಜಾರ್ಜ್’ ಮಾಹಿತಿ