ನವದೆಹಲಿ : ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಅಥವಾ ನೀಟ್ (UG) -2025ನ್ನು ಪೆನ್ ಮತ್ತು ಪೇಪರ್ ಮೋಡ್ (OMR ಆಧಾರಿತ)ನಲ್ಲಿ ಒಂದೇ ದಿನ ಮತ್ತು ಒಂದೇ ಪಾಳಿಯಲ್ಲಿ ನಡೆಸಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪ್ರಕಟಿಸಿದೆ. ಈ ನಿರ್ಧಾರವು ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ನಿಗದಿಪಡಿಸಿದ ಮಾರ್ಗಸೂಚಿಗಳಿಗೆ ಹೊಂದಿಕೆಯಾಗುತ್ತದೆ.
ಈ ಕಾಯ್ದೆಯಡಿ ಬರುವ ಎಲ್ಲಾ ವೈದ್ಯಕೀಯ ಸಂಸ್ಥೆಗಳಲ್ಲಿ ಭಾರತೀಯ ವೈದ್ಯ ಪದ್ಧತಿಯ ಬಿಎಎಂಎಸ್, ಬಿಯುಎಂಎಸ್ ಮತ್ತು ಬಿಎಸ್ಎಂಎಸ್ ಕೋರ್ಸ್ಗಳು ಸೇರಿದಂತೆ ಪ್ರತಿಯೊಂದು ವಿಭಾಗಗಳಲ್ಲಿ ಪದವಿಪೂರ್ವ ಕೋರ್ಸ್ಗಳ ಪ್ರವೇಶಕ್ಕಾಗಿ ಏಕರೂಪದ ನೀಟ್ (ಯುಜಿ) ಇರುತ್ತದೆ ಎಂದು ಎನ್ಟಿಎ ಘೋಷಿಸಿದೆ.
ಇದಲ್ಲದೆ, 2025 ನೇ ಸಾಲಿಗೆ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವಾ ಆಸ್ಪತ್ರೆಗಳಲ್ಲಿ ನಡೆಸಲಾಗುತ್ತಿರುವ B.Sc ನರ್ಸಿಂಗ್ ಕೋರ್ಸ್ಗಳಿಗೆ ಪ್ರವೇಶ ಬಯಸುವ ಎಂಎನ್ಎಸ್ (ಮಿಲಿಟರಿ ನರ್ಸಿಂಗ್ ಸರ್ವಿಸ್) ಆಕಾಂಕ್ಷಿಗಳು ನೀಟ್ (ಯುಜಿ) ಗೆ ಅರ್ಹತೆ ಪಡೆಯಬೇಕಾಗುತ್ತದೆ. ನೀಟ್ (UG) ಸ್ಕೋರ್’ನ್ನ ನಾಲ್ಕು ವರ್ಷಗಳ B.Sc ನರ್ಸಿಂಗ್ ಕೋರ್ಸ್ಗೆ ಆಯ್ಕೆ ಮಾಡಲು ಶಾರ್ಟ್ಲಿಸ್ಟ್ ಮಾಡಲು ಬಳಸಲಾಗುತ್ತದೆ.”
NEET UG 2025 to be conducted in Pen and Paper mode (OMR based) in Single day and Single Shift. pic.twitter.com/H1DYTgSGqI
— National Testing Agency (@NTA_Exams) January 16, 2025
Good News : 8ನೇ ವೇತನ ಆಯೋಗ : ಕೇಂದ್ರ ಸರ್ಕಾರಿ ನೌಕರರ ಸ್ಯಾಲರಿ ಶೇ.186ರಷ್ಟು ಹೆಚ್ಚಳ! ‘ಕನಿಷ್ಠ ವೇತನ’ ಏರಿಕೆ