ನವದೆಹಲಿ : ನೀಟ್-ಯುಜಿ 2024ರ ಹೊಸ ಪರೀಕ್ಷೆಗೆ ಅವಕಾಶ ನೀಡಲು ನಿರಾಕರಿಸಿದ ಆಗಸ್ಟ್ 2ರ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನ ಸುಪ್ರೀಂಕೋರ್ಟ್ ಬುಧವಾರ ತಿರಸ್ಕರಿಸಿದೆ. ಕಾಜಲ್ ಕುಮಾರಿ ಎಂಬವರು ಈ ಅರ್ಜಿಯನ್ನ ಸಲ್ಲಿಸಿದ್ದರು.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪರ್ಡಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ತನ್ನ ತೀರ್ಪಿನಲ್ಲಿ ಯಾವುದೇ ದೋಷವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
“ದಾಖಲೆಯ ಮೇಲ್ನೋಟಕ್ಕೆ ಯಾವುದೇ ದೋಷ ಗೋಚರಿಸುವುದಿಲ್ಲ. ಸುಪ್ರೀಂ ಕೋರ್ಟ್ ನಿಯಮಗಳು 2013 ರ ಆದೇಶ XLVII ನಿಯಮ 1 ರ ಅಡಿಯಲ್ಲಿ ಮರುಪರಿಶೀಲನೆಗೆ ಯಾವುದೇ ಪ್ರಕರಣವನ್ನು ಸ್ಥಾಪಿಸಲಾಗಿಲ್ಲ. ಆದ್ದರಿಂದ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಲಾಗಿದೆ” ಎಂದು ನ್ಯಾಯಪೀಠ ತನ್ನ ಅಕ್ಟೋಬರ್ 22 ರ ಆದೇಶದಲ್ಲಿ ತಿಳಿಸಿದೆ.
Supreme Court has dismissed the review petition against judgment refusing to order re-examination for NEET-UG 2024. pic.twitter.com/aE4jJBteX5
— ANI (@ANI) November 6, 2024
BREAKING : ಸಿಎಂ ವಿಚಾರಣೆ ಬೆನ್ನಲ್ಲೆ, ಲೋಕಾಯುಕ್ತ ಎಸ್.ಪಿ ಉದೇಶ್ ವಿರುದ್ಧ ದೂರು ದಾಖಲಿಸಿದ ಸ್ನೇಹಮಯಿ ಕೃಷ್ಣ!
BREAKING : ‘ಕ್ವಾಡ್ ಶೃಂಗಸಭೆ 2025’ಕ್ಕೆ ‘ಭಾರತ’ ಆತಿಥ್ಯ, ಟ್ರಂಪ್ ಸೇರಿ ಅಗ್ರ ‘ಜಾಗತಿಕ ನಾಯಕರು’ ಭಾಗಿ