ನವದೆಹಲಿ : ಸ್ನಾತಕೋತ್ತರ ವೈದ್ಯಕೀಯ ಕೋರ್ಸ್’ಗಳ ಪ್ರವೇಶಕ್ಕಾಗಿ ನೀಟ್-ಪಿಜಿ ಪರೀಕ್ಷೆ ಈ ತಿಂಗಳು ನಡೆಯಲಿದೆ ಎಂದು ಗೃಹ ಸಚಿವಾಲಯವು ಸರ್ಕಾರದ ಮೂಲಗಳು ತಿಳಿಸಿವೆ. ಇನ್ನು ಪರೀಕ್ಷೆ ಪ್ರಾರಂಭಕ್ಕೆ 2 ಗಂಟೆಗಳ ಮುಂಚಿತವಾಗಿ ಪ್ರಶ್ನೆ ಪತ್ರಿಕೆ ತಯಾರಿಸಲು ಯೋಜಿಸಿಲಾಗುತ್ತಿದೆ ಎಂದು ವರದಿಯಾಗಿದೆ.
ಅಂದ್ಹಾಗೆ, ಪದವಿಪೂರ್ವ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆ ಸೇರಿದಂತೆ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಜೂನ್ 23 ರಂದು ನಿಗದಿಯಾಗಿದ್ದ ಪರೀಕ್ಷೆಯನ್ನ ಪ್ರಾರಂಭವಾಗುವ ಕೆಲವೇ ಗಂಟೆಗಳ ಮೊದಲು ಮುಂದೂಡಲಾಗಿತ್ತು. ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸುವ ನೀಟ್-ಪಿಜಿ ಪ್ರಕ್ರಿಯೆಗಳ ದೃಢತೆಯ ಸಮಗ್ರ ಮೌಲ್ಯಮಾಪನವನ್ನ ಕೈಗೊಳ್ಳುವುದಾಗಿ ಸರ್ಕಾರ ಆಗ ಹೇಳಿತ್ತು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.
ಲಕ್ಷಾಂತರ ಮಹತ್ವಾಕಾಂಕ್ಷೆಯ ವೈದ್ಯಕೀಯ ವೃತ್ತಿಪರರು ನೋಂದಾಯಿಸಿಕೊಂಡಿದ್ದ ಪರೀಕ್ಷೆಯನ್ನ ರದ್ದುಗೊಳಿಸಿರುವುದು ತೀವ್ರ ಪ್ರತಿಭಟನೆಗೆ ಕಾರಣವಾಯಿತು.
‘ಫ್ರೀ’ ಬಸ್ ಕೊಟ್ಟಿದ್ದಕ್ಕೆ ನಮ್ಮ ಮೆಟ್ರೋಗೆ ಜನನೇ ಬರ್ತಿಲ್ಲ : ಮೋದಿ ಭೇಟಿ ಪ್ರಸ್ತಾಪಿಸಿದ ಡಿಸಿಎಂ ಡಿಕೆ ಶಿವಕುಮಾರ್